ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ.
ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಮೇಲೆ ಫ್ರೆಶ್ ಕ್ರೀಮ್ ನಿಂದ ಅಲಂಕರಿಸಿದರೆ ರುಚಿಯಾದ ಪುದೀನಾ ಸೂಪ್ ಸಿದ್ಧ.