ಹರ್ಬಲ್ ಗ್ರೀನ್ ಟೀ
ಹರ್ಬಲ್ ಗ್ರೀನ್ ಟೀ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ನೀರು-ಒಂದು ಬಟ್ಟಲು
- ಕಾಳು ಮೆಣಸಿನ ಪುಡಿ-ಒಂದು ಚಿಟಿಕೆ
- ಏಲಕ್ಕೆ ಪುಡಿ- ಒಂದು ಚಿಟಿಕೆ
- ಪುದೀನಾ ಎಲೆ-15 ರಿಂದ 20
- ತುಳಸಿ ಎಲೆ- 15 ರಿಂದ 20
- ನಿಂಬೆರಸ- ಒಂದು ಚಮಚ
- ಜೇನುತುಪ್ಪ ಅಥವಾ ಸಕ್ಕರೆ- ಒಂದು ಚಮಚ
ಮಾಡುವ ವಿಧಾನ...
- ಟೀ ತಯಾರಿಸುವ ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ. ಕುದಿ ಬಂದ ನಂತರ ಚಿಟಿಕೆ ಕಾಳು ಮೆಣಸಿನ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ.
- ಬಳಿಕ ಪುದೀನಾ ಎಲೆ ಹಾಗೂ ತುಳಸಿ ಎಲೆಗಳನ್ನು ಹಾಕಿ. ಪ್ಲೇಟ್ ಮುಚ್ಚಿ. ಸಣ್ಣ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕಾಯಿಸಿ.
- ನಂತರ ಒಲೆ ಮೇಲಿಂದ ಇಳಿಸಿ ನಿಂಬೆರಸ ಬೆರೆಸಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ ಹಾಕಿ. ಬಳಿಕ ಕುದಿಸಿ, ಸೋಸಿ. ಇದೀಗ ಆರೋಗ್ಯಕರವಾದ ಹರ್ಬಲ್ ಗ್ರೀನ್ ಟೀ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.