ಪೀನಟ್ ಬಟರ್ ಮಿಠಾಯಿ
ರುಚಿಕರವಾದ ಪೀನಟ್ ಬಟರ್ ಮಿಠಾಯಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಪೀನಟ ಬಟರ್ – 1 ಬಟ್ಟಲು
- ಎಣ್ಣೆ – ಅರ್ಧ ಬಟ್ಟಲು
- ಮೇಪಲ್ ಸಿರಪ್ – ಅರ್ಧ ಬಟ್ಟಲು
- ವೆನಿಲ್ಲಾ ಎಸೆನ್ಸ್– ಕಾಲು ಚಮಚ
- ಒರಟಾಗಿ ಪುಡಿ ಮಾಡಿದ ನೆಲ ಕಡಲೆ – ಕಾಲು ಬಟ್ಟಲು
ಮಾಡುವ ವಿಧಾನ...
- ಮೊದಲಿಗೆ ಒಂದು ಬೌಲ್ನಲ್ಲಿ ಮೇಲೆ ತಿಳಿಸಲಾದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಒಂದು ಬಟ್ಟಲಿಗೆ ಬಟರ್ ಪೇಪರ್ ಅನ್ನು ಜೋಡಿಸಿ, ಅದರ ಮೇಲೆ ಈ ಮಿಶ್ರಣವನ್ನು ಸುರಿಯಿರಿ.
- ಬಟ್ಟಲನ್ನು ಫ್ರಿಜ್ನಲ್ಲಿ ಇಟ್ಟು, ಸುಮಾರು 1 ಗಂಟೆ ಗಟ್ಟಿಯಾಗಲು ಬಿಡಿ.
- ಈಗ ಬಟ್ಟಲನ್ನು ಹೊರ ತೆಗೆದು, ಮಿಠಾಯಿಯನ್ನು ಬಟ್ಟಲಿನಿಂದ ಬೇರ್ಪಡಿಸಿ.
- ಸುಮಾರು 5 ನಿಮಿಷ ರೂಮ್ ಟೆಂಪ್ರೇಚರ್ನಲ್ಲಿ ಮಿಠಾಯಿಯನ್ನು ಸ್ವಲ್ಪ ಮೃದುವಾಗಲು ಬಿಟ್ಟು, ಬಳಿಕ ಚಾಕು ಸಹಾಯದಿಂದ ಚೌಕಾಕಾರವಾಗಿ ಕತ್ತರಿಸಿಕೊಳ್ಳಿ. ಇದೀಗ ಪೀನಟ್ ಬಟರ್ ಮಿಠಾಯಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.