ಬೇಕಾಗುವ ಪದಾರ್ಥಗಳು....ಹಾಲು– 1 ಲೀಟರ್ತೊಳೆದು ನೆನೆಸಿದ ಅಕ್ಕಿ – ಅರ್ಧ ಬಟ್ಟಲುಸಕ್ಕರೆ– ಅರ್ಧ ಬಟ್ಟಲುಏಲಕ್ಕಿ ಪುಡಿ– ಅರ್ಧ ಚಮಚಕೇಸರಿ ದಳಗಳು– ಚಿಟಿಕೆಕತ್ತರಿಸಿದ ಬಾದಾಮಿ – 2 ಚಮಚಕತ್ತರಿಸಿದ ಪಿಸ್ತಾ – 2 ಚಮಚ.ಮಾಡುವ ವಿಧಾನ....ಮೊದಲಿಗೆ ತಳವಿರುವ ಪ್ಯಾನ್‌ನಲ್ಲಿ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ.ತೊಳೆದು ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ, ಅಕ್ಕಿ ಮೃದುವಾಗುವವರೆಗೆ ಮತ್ತು ಹಾಲು ದಪ್ಪವಾಗುವವರೆಗೆ ಬೇಯಿಸಿ.ಹಾಲಿನ ಮಿಶ್ರಣಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಬೆರೆಸಿ.ಸಕ್ಕರೆ ಕರಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸುವುದನ್ನು ಮುಂದುವರಿಸಿ.ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.ನಂತರ ಅದನ್ನು ಫ್ರಿಜ್‌ನಲ್ಲಿ 1-2 ಗಂಟೆ ಇಡಿ. ನಂತರ ಬಾದಾಮಿ ಹಾಗೂ ಪಿಸ್ತಾದಿಂದ ಅಲಂಕರಿಸಿದರೆ ರುಚಿಕರವಾದ ಅಕ್ಕಿ ಪಾಯಸ ಸವಿಯಲು ಸಿದ್ಧ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics