ಬೇಬಿಕಾರ್ನ್ ಪೆಪ್ಪರ್ ಫ್ರೈ
ಬೇಬಿಕಾರ್ನ್ ಪೆಪ್ಪರ್ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಬೇಬಿ ಕಾರ್ನ್- 9
- ಬೆಳ್ಳುಳ್ಳಿ ಪೇಸ್ಟ್- 1 ಚಮಚ
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1-2
- ಕಾಳುಮೆಣಸಿನ ಪುಡಿ- 1 ಚಮಚ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ- 2 ಚಮಚ
- ಕರಿಬೇವು- ಸ್ವಲ್ಪ
- ಹಸಿಮೆಣಿಸಿನ ಕಾಯಿ- 3-4
- ಸೋಯಾ ಸಾಸ್- ಕಾಲು ಚಮಚ
- ವಿನೆಗರ್- ಅರ್ಧ ಚಮಚ
ಮಾಡುವ ವಿಧಾನ...
- ಮೊದಲಿಗೆ ಬೇಬಿ ಕಾರ್ನ್ ಗಳನ್ನು ಚೆನ್ನಾಗಿ ತೊಳೆದು ಉದ್ದಕ್ಕೆ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ಪಾತ್ರೆಯಿಟ್ಟು, ಅದಕ್ಕೆ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ತೊಳೆದು ಕತ್ತರಿಸಿಕೊಂಡ ಬೇಬಿ ಕಾರ್ನ್ ಗಳನ್ನು ಹಾಕಿ. 5-10 ನಿಮಿಷ ಬೇಯಿಸಿಕೊಳ್ಳಿ.
- ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಕರಿಬೇವು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಂಡು, ತಟ್ಟೆಯೊಂದಕ್ಕೆ ಹಾಕಿ ತೆಗೆದಿಟ್ಟುಕೊಳ್ಳಿ.
- ಇದೇ ಎಣ್ಣೆಗೆ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಹಸಿಮೆಣಸಿನ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಸೋಯಾ ಸಾಸ್, ವಿನಿಗರ್ ಹಾಗೂ ಬೇಯಿಸಿಕೊಂಡ ಬೇಬಿ ಕಾರ್ನ್ ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಈಗಾಗಲೇ ಹುರಿದಿಟ್ಟುಕೊಂಡ ಕರಿಬೇವು ಹಾಗೂ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿದರೆ ರುಚಿಕರವಾದ ಬೇಬಿಕಾರ್ನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.