ಬೇಬಿ ಕಾರ್ನ್ ರೋಸ್ಟ್
ರುಚಿಕರವಾದ ಬೇಬಿ ಕಾರ್ನ್ ರೋಸ್ಟ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಬೇಬಿ ಕಾರ್ನ್ – 15-20
- ಎಣ್ಣೆ – 2 ಚಮಚ
- ಕರಿಬೇವಿನ ಎಲೆ – ಸ್ವಲ್ಪ
- ಅರಿಶಿನ – ಅರ್ಧ ಚಮಚ
- ಖಾರದಪುಡಿ- 1 ಚಮಚ
- ಆಮ್ಚೂರ್ ಪುಡಿ – ಅರ್ಧ ಚಮಚ
- ಗರಂ ಮಸಾಲೆ ಪುಡಿ – ಅರ್ಧ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಜೋಳದ ಹಿಟ್ಟು – 2 ಚಮಚ
- ಚಾಟ್ ಮಸಾಲಾ ಪುಡಿ – ಕಾಲು ಚಮಚ
- ಎಣ್ಣೆ – 4 ಚಮಚ
ಮಾಡುವ ವಿಧಾನ...
- ಮೊದಲಿಗೆ ಬೇಬಿ ಕಾರ್ನ್ ಅನ್ನು ಚೆನ್ನಾಗಿ ತೊಳೆದು, ಕುಕ್ಕರ್ನಲ್ಲಿ ಹಾಕಿ, ಮುಳುಗುವಷ್ಟು ನೀರು ಸೇರಿಸಿ, ಮಧ್ಯಮ ಉರಿಯಲ್ಲಿ 2 ಕೂಗು ಕೂಗಿಸಿ ಬೇಯಿಸಿಕೊಳ್ಳಿ.
- ಬಳಿಕ ಕುಕ್ಕರ್ನ ಮುಚ್ಚಳ ತೆಗೆದು, ನೀರನ್ನು ಬಸಿದುಕೊಂಡು, ಬೆಂದ ಬೇಬಿ ಕಾರ್ನ್ ಅನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
- ಈಗ ಒಂದು ಪ್ಯಾನ್ ಅನ್ನು ತೆಗೆದುಕೊಂಡು, ಅದಕ್ಕೆ 2 ಚಮಚ ಎಣ್ಣೆ ಹಾಕಿ ಹಾಗೂ ಕರಿಬೇವಿನ ಎಲೆ ಸೇರಿಸಿ ಸಿಡಿಸಿ.
- ಉರಿಯನ್ನು ಕಡಿಮೆ ಮಾಡಿ, ಅರಿಶಿನ, ಕೆಂಪು ಮೆಣಸಿನಪುಡಿ, ಆಮ್ಚೂರ್ ಪುಡಿ, ಉಪ್ಪು, ಗರಂ ಮಸಾಲೆ ಪುಡಿ ಸೇರಿಸಿ ಹುರಿಯಿರಿ.
- ಈಗ ಕತ್ತರಿಸಿಟ್ಟುಕೊಂಡಿದ್ದ ಬೇಬಿ ಕಾರ್ನ್ ಅನ್ನು ಸೇರಿಸಿ ಮಿಶ್ರಣ ಮಾಡಿ.
- ಬಳಿಕ ಜೋಳ ಹಿಟ್ಟನ್ನು ಸೇರಿಸಿ, 4 ಚಮಚ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಫ್ರೈ ಮಾಡಿ.
- ಕೊನೆಯಲ್ಲಿ ಚಾಟ್ ಮಸಾಲಾವನ್ನು ಸಿಂಪಡಿಸಿದರೆ, ರುಚಿಕರವಾದ ಬೇಬಿ ಕಾರ್ನ್ ರೋಸ್ಟ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.