ಬೆಂಡೆಕಾಯಿ ಪಾಪ್ಕಾರ್ನ್
ರುಚಿಕರವಾದ ಬೆಂಡೆಕಾಯಿ ಪಾಪ್ಕಾರ್ನ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಬೆಂಡೆಕಾಯಿ- 15-20
- ಅರಿಶಿಣದ ಪುಡಿ- ಅರ್ಧ ಚಮಚ
- ಅಚ್ಚ ಖಾರದಪುಡಿ- 2 ಚಮಚ
- ಆಮ್ಚೂರ್ ಪುಡಿ- 1 ಚಮಚ
- ಗರಂ ಮಸಾಲೆ ಪುಡಿ- ಅರ್ಧ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಕಾರ್ನ್ ಫ್ಲೋರ್- 1 ಚಮಚ
- ಮೈದಾ ಹಿಟ್ಟು- 1 ಬಟ್ಟಲು
- ಬ್ರೆಡ್ ಕ್ರಂಬ್ಸ್- 1-2 ಬಟ್ಟಲು
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
- ಬೆಂಡೆಕಾಯಿಯನ್ನು 1 ಇಂಚು ಉದ್ದಕ್ಕೆ ಕತ್ತರಿಸಿ. ನೀರು ಇಲ್ಲದಂತೆ ಚೆನ್ನಾಗಿ ಒರೆಸಿಕೊಳ್ಳಿ. ಬಳಿಕ ಅರಿಶಿನ, 1 ಚಮಚ ಖಾರದ ಪುಡಿ, ಆಮ್ಚುರ್ ರುಚಿ, ಗರಂ ಮಸಾಲಾ, ರುಚಿಕೆ ತಕ್ಕಷ್ಟು ಉಪ್ಪು, 2 ಚಮಚ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ 15 ನಿಮಿಷ ಮಸಾಲೆ ಹಿಡಿಯಲು ಬಿಡಿ.
- ನಂತರ ಒಂದು ಬಟ್ಟಲು ತೆಗೆದುಕೊಂಡು 1 ಕಪ್ ಮೈದಾ, ಮುಕ್ಕಾಲು ಬಟ್ಟಲು ಕಪ್ ಕಾರ್ನ್ ಫ್ಲೋರ್, 1 ಚಮಚ ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ ಉಂಡೆಗಳಿಲ್ಲದಂತೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬಳಿಕ ಮಸಾಲೆ ಮಿಶ್ರಿತ ಬೆಂಡೆಕಾರಿಗಳನ್ನು ಅದ್ದಿ ತೆಗೆದು, ಬ್ರೆಡ್ ಕ್ರಂಬ್ಸ್ ನಲ್ಲಿ ಹಾಕಿ ರೋಲ್ ಮಾಡಿ. ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.
- ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಕಾದ ನಂತರ ಈ ಬೆಂಡೆಕಾಯಿಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬೆಂಡೆಕಾಯಿ ಪಾಪ್ ಕಾರ್ನ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.