- ತೆಳುವಾದ ಅವಲಕ್ಕಿ- 1 ಬಟ್ಟಲು
- ಆಲೂಗಡ್ಡೆ (ಬೇಯಿಸಿದ್ದು)- 2
- ಅರಿಶಿನದ ಪುಡಿ- ಕಾಲು ಚಮಚ
- ಖಾರದ ಪುಡಿ- ಕಾಲು ಚಮಚ
- ಗರಂ ಮಸಾಲ- ಕಾಲು ಚಮಚ
- ಆಮ್ ಚೂರ್ ಪುಡಿ- ಕಾಲು ಚಮಚ
- ಚಾಟ್ ಮಸಾಲ- ಕಾಲು ಚಮಚ
- ಶುಂಠಿ, ಬೆಳ್ಳುಳ್ಳಿ- ಪೇಸ್ಟ್ ಸ್ವಲ್ಪ
- ಕಾಳು ಮೆಣಸಿನ ಪುಡಿ- ಕಾಲು ಚಮಚ
- ಕಾರ್ನ್ ಫ್ಲೋರ್- 3 ಚಮಚ
- ಬ್ರೆಡ್ ಕ್ರಂಬ್ಸ್-3 ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಮೈದಾ ಹಿಟ್ಟು- ಒಂದು ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
- ತೆಳು ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದ ತಕ್ಷಣವೇ ಒಂದು ಅಗಲವಾದ ಪಾತ್ರೆಗೆ ಹಾಕಿಕೊಳ್ಳಬೇಕು.
- ಅದೇ ಪಾತ್ರೆಗೆ ಎರಡು ಬೇಯಿಸಿದ ಆಲೂಗಡ್ಡೆ, ಅರಿಶಿನ, ಖಾರದ ಪುಡಿ, ಗರಂ ಮಸಾಲ, ಆಮ್ ಚೂರ್ ಪುಡಿ (ಮಾವಿನಹಣ್ಣಿನ ಪುಡಿ), ಚಾಟ್ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ನೀರು ಹಾಕದಂತೆ ಚಪಾತಿ ಹಿಟ್ಟಿನ ಹದಕ್ಕಿಂತ ಕಡಿಮೆ ಹದದಲ್ಲಿ ಕಲೆಸಿಕೊಳ್ಳಬೇಕು.
- ಮತ್ತೊಂದು ಪಾತ್ರೆಗೆ ಕಾರ್ನ್ ಫ್ಲೋರ್, ಮೈದಾಹಿಟ್ಟು, ಮೆಣಸಿನ ಪುಡಿ, ಉಪ್ಪು, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಬೇಕು.
- ಇದೇ ಮಿಶ್ರಣಕ್ಕೆ ಈ ಹಿಂದೆ ಮಾಡಿದ್ದ ಮಿಶ್ರಣವನ್ನು ದಪ್ಪವಾಗಿ ಚಪ್ಪಟೆ ಆಕಾರದಲ್ಲಿ ಮಾಡಿ ಹಾಕಬೇಕು. ತಕ್ಷಣವೇ ತೆಗೆದು ಬ್ರೆಡ್ ಪುಡಿಯೊಳಗೆ ಅದ್ದಿ ಸ್ವಲ್ಪವೇ ಎಣ್ಣೆ ಹಾಕಿಕೊಂಡು ಬಂಗಾರದ ಬಣ್ಣ ಬರುವವರೆಗೆ ಕರಿದುಕೊಂಡರೆ ರುಚಿಕರವಾದ ಅವಲಕ್ಕಿ ಕಟ್ಲೆಟ್ ಸವಿಯಲು ಸಿದ್ಧ.