- ಬ್ರೊಕೋಲಿ- 1
- ಈರುಳ್ಳಿ- 1
- ಬೆಳ್ಳುಳ್ಳಿ- 4-5 ಎಸಳು
- ದೊಡ್ಡಪತ್ರೆ- 1 ಚಮಚ
- ಹಾಲು- ಅರ್ಧ ಬಟ್ಟಲು
- ಬೆಣ್ಣೆ- ಅಗತ್ಯಕ್ಕೆ ತಕ್ಕಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
- ಕಾಳುಮೆಣಸಿನ ಪುಡಿ- ಅಗತ್ಯಕ್ಕೆ ತಕ್ಕಷ್ಟು
- ಒಂದು ಬಾಣಲೆಯಲ್ಲಿ ಬ್ರೊಕೋಲಿ ಜೊತೆಗೆ, ಬೆಳ್ಳುಳ್ಳಿ ಮತ್ತು ಒಂದು ಚಿಟಿಕೆ ಉಪ್ಪನ್ನು ಸೇರಿಸಿ. 5-10 ನಿಮಿಷಗಳ ಕಾಲ ಹಾಗೆಯೇ ಕುದಿಯಲು ಬಿಡಿ. ಅನಂತರದಲ್ಲಿ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
- ಬಾಣಲೆಯಲ್ಲಿ ಬೆಣ್ಣೆ, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಈ ಮಿಶ್ರಣವು ತಣ್ಣಗಾದ ನಂತರ ಬೇಯಿಸಿದ ಬ್ರೊಕೋಲಿ ಮತ್ತು ಇತರ ಪದಾರ್ಥಗಳೊಂದಿಗೆ ಅದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
- ರುಬ್ಬಿಕೊಂಡ ಬ್ರೊಕೋಲಿಯನ್ನು ಬಾಣಲೆಗೆ ಹಾಕಿ ಪ್ಯೂರಿ ರೀತಿ ಆಗುವಂತೆ ಕೈಯಾಡಿಸಿ. ಬಳಿಕ ಸ್ವಲ್ಪ ಪ್ರಮಾಣದ ಹಾಲನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ನಯವಾಗಿ ಬೇಯಿಸಿಕೊಳ್ಳಬೇಕು.
- ನಂತರ ಸ್ವಲ್ಪ ದೊಡ್ಡಪತ್ರೆ ಜೊತೆಗೆ ಉಪ್ಪು ಮತ್ತು ಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಾಲ್ಕರಿಂದ ಐದು ನಿಮಿಷಗಳವರೆಗೆ ಚೆನ್ನಾಗಿ ಬೇಯಿಸಿ.