ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಸಬ್ಬಕ್ಕಿ ದೋಸೆ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
ಸಬ್ಬಕ್ಕಿ / ಸಾಬೂದಾನ- ಅರ್ಧ ಬಟ್ಟಲು
ಅಕ್ಕಿ- ಅರ್ಧ ಬಟ್ಟಲು
ಆಲೂಗಡ್ಡೆ- ಬೇಯಿಸಿದ್ದು 1
ಮೊಸರು- ಕಾಲು ಬಟ್ಟಲು
ಹಸಿಮೆಣಸಿನ ಕಾಯಿ - 2 (ಸಣ್ಣಗೆ ಕತ್ತರಿಸಿದ್ದು)
ಶುಂಠಿ- 1 ಇಂಚು (ಸಣ್ಣಗೆ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಕತ್ತರಿಸಿದ್ದು)
ಜೀರಿಗೆ- 1 ಚಮಚ
ಕಾಳು ಮೆಣಸಿನ ಪುಡಿ- ಅರ್ಧ ಚಮಚ
ಕಡಲೆಕಾಯಿ- 2 ಚಮಚ (ಹುರಿದು ಪುಡಿಮಾಡಿದ್ದು)
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಮೊದಲನೆಯದಾಗಿ ಬಾಣಲೆಯಲ್ಲಿ ಅರ್ಧ ಬಟ್ಟಲು ಸಬ್ಬಕ್ಕಿಯನ್ನು 4 ರಿಂದ 5 ನಿಮಿಷಗಳ ಕಾಲ ಸುವಾಸನೆಯುಕ್ತವಾಗುವವರೆಗೆ ಹುರಿದುಕೊಳ್ಳಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್'ಗೆ ಹಾಕಿಕೊಳ್ಳಿ, ಬಳಿಕ ಅರ್ಧ ಬಟ್ಟಲು ಅಕ್ಕಿಯನ್ನೂ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಿದ ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಇದನ್ನು ಪುಡಿಗೆ ಸೇರಿಸಿಕೊಳ್ಳಿ.
ಈ ಮಿಶ್ರಣಕ್ಕೆ ಮೊಸರು, ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಕಾಳುಮೆಣಸಿನ ಪುಡಿ, ಕಡಲೆಕಾಯಿ, ಉಪ್ಪು ಸೇರಿಸಿ. ಹಿಟ್ಟಿನಲ್ಲಿ ಉಂಡೆಯಾಗದಂತೆ ಮಿಶ್ರಣ ಮಾಡಿಕೊಳ್ಳಿ.
20 ನಿಮಿಷ ಹಿಟ್ಟನ್ನು ಹಾಗೆ ಬಿಡಿ. ಬಿಸಿಯಾದ ಕಾವಲಿ ಮೇಲೆ ಹಾಕಿ ಎರಡೂ ಬದಿಯಲ್ಲೂ ಕೆಂಪಗಾಗಿಸಿದರೆ ಸಬ್ಬಕ್ಕಿ ದೋಸೆ ಸವಿಯಲು ಸಿದ್ಧ.