ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ 2 ಲೋಟ ನೀರು ಸೇರಿಸಿ 5 ರಿಂದ 6 ವಿಶಲ್ ಕೂಗಿಸಿ. ವಿಶಲ್ ಆರಿದ ಮೇಲೆ ಸಿಪ್ಪೆ ಹಾಗೂ ಗೊರಟೆ ತೆಗೆದು ಮಾವಿನ ಪಲ್ಪ್ ಅನ್ನ ತೆಗೆದು ಮಿಕ್ಸರ್ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತೊಗರಿಬೇಳೆಯನ್ನು ನುಣ್ಣಗೆ ಬೇಯಿಸಿಕೊಳ್ಳಿ.
ಈಗ ಪ್ಯಾನ್‌ವೊಂದಕ್ಕೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಗೂ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಇಂಗು, ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಕೈಯಾಡಿಸಿ.
ಅದಕ್ಕೆ ಮಾವಿನಕಾಯಿ ತಿರುಳು, ಟೊಮೆಟೊ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಬೆಲ್ಲ, ಬೇಯಿಸಿದ ತೊಗರಿಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಇದೀಗ ರುಚಿಕರವಾದ ಮಾವಿನಕಾಯಿ ರಸಂ ಸವಿಯಲು ಸಿದ್ಧ.