ಬ್ರೆಡ್ ರೋಲ್
ರುಚಿಕರವಾದ ಬ್ರೆಡ್ ರೋಲ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಆಲೂಗಡ್ಡೆ- 2
- ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
- ಹಸಿ ಮೆಣಸಿನ ಕಾಯಿ- 2
- ಉಪ್ಪು-ರುಚಿಗೆ ತಕ್ಕಷ್ಟು
- ಖಾರದ ಪುಡಿ- ಸ್ವಲ್ಪ
- ಜೀರಿಗೆ ಪುಡಿ-ಸ್ವಲ್ಪ
- ಚಾಟ್ ಮಸಾಲೆ ಪುಡಿ- ಸ್ವಲ್ಪ
- ಬ್ರೆಡ್ ಸ್ಲೈಸ್- 5-6
- ಮೈದಾ ಹಿಟ್ಟು- ಸ್ವಲ್ಪ
- ಎಣ್ಣೆಗೆ- ಕರಿಯಲು ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ...
- ಮೊದಲಿಗೆ ಕುಕ್ಕರ್'ಗೆ ಆಲೂಗಡ್ಡೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು, ನುಣ್ಣಗೆ ಮಾಡಿಕೊಳ್ಳಿ.
- ಇದಕ್ಕೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಉಪ್ಪು, ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ ಎಲ್ಲವನ್ನೂ ಹಾಕಿ ಮಿಶ್ರಣ ಮಾಡಿಕೊಳ್ಳಿ.
- ಬಳಿಕ ಮಿಶ್ರಣವನ್ನು ಚಿಕ್ಕ ಚಿಕ್ಕ ಸಿಲಿಂಡರ್ ಆಕಾರಕ್ಕೆ ಮಾಡಿಕೊಳ್ಳಿ.
- ಇದೀಗ ಬ್ರೆಡ್ ಪೀಸ್ ಗಳನ್ನು ತೆಗೆದುಕೊಂಡು ನಾಲ್ಕು ಬದಿಯಲ್ಲಿರುವ ಬ್ರೌನ್ ಬ್ರೆಡ್ ನ್ನು ಕತ್ತರಿಸಿಕೊಳ್ಳಿ.
- ನಂತರ ಮೈದಾ ಹಿಟ್ಟಿಗೆ ನೀರು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.
- ಬಳಿಕ ಲಟ್ಟಣಿಗೆಯಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಒತ್ತಿಕೊಂಡು, ಇದಕ್ಕೆ ಈಗಾಗಲೇ ಮಾಡಿಟ್ಟುಕೊಂಡಿದ್ದ ಮೈದಾ ಹಿಟ್ಟಿನ ಪೇಸ್ಟ್ ನ್ನು ಸವರಿಕೊಂಡು, ಮಸಾಲೆ ಮಿಶ್ರಣವನ್ನು ಇಟ್ಟು ರೋಲ್ ಮಾಡಿ.
- ಒಲೆಯ ಮೇಲೆ ಬಾಣಲೆ ಇಟ್ಟು, ರೋಲ್ ಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ, ರುಚಿಕರವಾದ ಬ್ರೆಡ್ ರೋಲ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.