ಕಲ್ಲಂಗಡಿ ಹಣ್ಣಿನ ಬರ್ಫಿ
ರುಚಿಕರವಾದ ಕಲ್ಲಂಗಡಿ ಹಣ್ಣಿನ ಬರ್ಫಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗದ ತುರಿ - 2 ಬಟ್ಟಲು
- ತೆಂಗಿನ ತುರಿ- 1 ಬಟ್ಟಲು
- ರವೆ- ಅರ್ಧ ಬಟ್ಟಲು
- ಸಕ್ಕರೆ- ಎರಡು ಬಟ್ಟಲು
- ತುಪ್ಪ 2-3 ಚಮಚ
ಮಾಡುವ ವಿಧಾನ...
- ಮೊದಲು ಬಿಳಿ ಭಾಗದ ತುರಿಯನ್ನು ಬಾಣಲೆಗೆ ಹಾಕಿ ನೀರನ್ನು ಇಂಗಿಸಿ.
- ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ. ಪಾಕ ಬಂದು ಗಟ್ಟಿಯಾಗಬೇಕು
- ಮಧ್ಯೆ ಮಧ್ಯೆ ತುಪ್ಪ ಸೇರಿಸಿ. ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ರವೆಯನ್ನು ಚೆನ್ನಾಗಿ ಹುರಿದು ಮಿಶ್ರಣ ಮಾಡಿ.
- ತಳ ಬಿಡುವ ಹಂತಕ್ಕೆ ಬಂದಾಗ ಒಂದು ಚಮಚ ತುಪ್ಪ ಸೇರಿಸಿ. ಒಂದು ಪ್ಲೇಟಿಗೆ ಹಾಕಿ, ನಂತರ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಕಲ್ಲಂಗಡಿ ಹಣ್ಣಿನ ಬರ್ಫಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.