ಪೆಪ್ಪರ್ ರೈಸ್ 
ಅಡುಗೆ

ಪೆಪ್ಪರ್ ರೈಸ್

ರುಚಿಕರವಾದ ಪೆಪ್ಪರ್ ರೈಸ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಕಾಳು ಮೆಣಸು- 1 ಚಮಚ
  • ಜೀರಿಗೆ- 1 ಚಮಚ
  • ಕರಿಬೇವು- ಅರ್ಧ ಹಿಡಿಯಷ್ಟು
  • ತುಪ್ಪ- 2 ಚಮಚ
  • ಸಾಸಿವೆ- ಸ್ವಲ್ಪ
  • ಉದ್ದಿನ ಬೇಳೆ- ಸ್ವಲ್ಪ
  • ಕಡಲೆಬೇಳೆ-ಸ್ವಲ್ಪ
  • ಕಡಲೆಕಾಯಿ ಬೀಜ-ಸ್ವಲ್ಪ
  • ಗೋಡಂಬಿ-ಸ್ವಲ್ಪ
  • ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಇಂಗು- ಸ್ವಲ್ಪ
  • ಹಸಿಮೆಣಸಿನ ಕಾಯಿ- 1-2
  • ಬ್ಯಾಡಗಿ ಮೆಣಸಿನಕಾಯಿ- 1
  • ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
  • ಅನ್ನ- ಒಂದು ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ನಿಂಬೆರಸ - ಅರ್ಧ ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

  • ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಮೆಣಸು, ಜೀರಿಗೆ ಹಾಗೂ ಕರಿಬೇವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್'ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
  • ನಂತರ ಮತ್ತೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಕಡಲೆಕಾಯಿ ಬೀಜ, ಗೋಡಂಬಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ನಂತರ ಬೆಳ್ಳುಳ್ಳಿ, ಇಂಗು, ಹಸಿಮೆಣಸಿನ ಕಾಯಿ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಕೆಂಪಗೆ ಮಾಡಿಕೊಳ್ಳಿ. ನಂತರ ಈರುಳ್ಳಿಯನ್ನೂ ಹಾಕಿ ಕೆಂಪಗೆ ಮಾಡಿಕೊಳ್ಳಿ. ಇದೀಗ ಪುಡಿ ಮಾಡಿಕೊಂಡ ಕಾಳುಮೆಣಸಿನ ಮಿಶ್ರಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಅನ್ನ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಪೆಪ್ಪರ್ ರೈಸ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

ಬೆಂಗಳೂರು: ಮನೆಯಲ್ಲೇ ತಂದೆ-4 ವರ್ಷದ ಮಗ ನಿಗೂಢ ಸಾವು; ಬೆಡ್​ರೂಮ್​​ನಲ್ಲಿ ಮಲಗಿದ್ದ ಪತ್ನಿಯನ್ನು ವಶಕ್ಕೆ ಪಡೆದ ಪೊಲೀಸರು!

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ