ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಾಲೆ ಇಟ್ಟು, ಒಂದು ಚಮಚ ಬೆಣ್ಣೆ ಹಾಕಿಕೊಂಡು ಅದು ಕರಗಿದ ಬಳಿಕ ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿಕೊಂಡು ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಶಾಹಿ ಜೀರಿಗೆ, ಚೆಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿಕೊಂಡು ಬಳಿಕ ಅದಕ್ಕೆ ಕಲ್ಲಂಗಡಿ ಬೀಜ, ಬಾದಾಮಿ, ಗೋಡಂಬಿ ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ.
ಹುರಿದ ಮೇಲೆ ಅದಕ್ಕೆ 1 ಬಟ್ಟಲು ನೀರನ್ನು ಸೇರಿಸಿಕೊಂಡು ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ನಂತರ ಮಿಶ್ರಣಕ್ಕೆ ಹಾಕಿದ್ದ ಮಸಾಲೆ ಪದಾರ್ಥಗಳು ಅಂದರೆ ಚೆಕ್ಕೆ, ಲವಂಗ, ಏಲಕ್ಕಿಯನ್ನು ತೆಗೆದಿಡಿ.
ಬಳಿಕ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಅದನ್ನು ಸೋಸಿಕೊಳ್ಳಿ.
ಬಳಿಕ ಬಾಣಾಲೆಗೆ ಸ್ವಲ್ಪ ಬೆಣ್ಣೆ ಹಾಕಿಕೊಂಡು ಕರಗಿದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
ಅದಕ್ಕೆ ಪನೀರ್ ಕ್ಯೂಬ್ಸ್ ಹಾಕಿಕೊಂಡು ಒಂದು ನಿಮಿಷಗಳ ಕಾಲ ಹುರಿದುಕೊಳ್ಳಿ. ಬಳಿಕ ಅದಕ್ಕೆ ಅಚ್ಚಖಾರದ ಪುಡಿ, ಅರಶಿಣ ಮತ್ತು ಉಪ್ಪು ಹಾಗೂ ನೀರಲ್ಲಿ ನೆನೆಸಿದ ಕೇಸರಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿಕೊಳ್ಳಿ. ಬಳಿಕ ಸ್ವಲ್ಪ ಸಕ್ಕರೆ ಹಾಗೂ ಫ್ರೆಶ್ ಕ್ರೀಮ್ ಸೇರಿಸಿಕೊಂಡು ಮಿಶ್ರಣ ಸ್ವಲ್ಪ ದಪ್ಪವಾಗುವವರೆಗೆ ತಿರುವಿಕೊಳ್ಳಿ. ಇದೀಗ ರುಚಿಕರವಾದ ಶಾಹಿ ಪನೀರ್ ಸವಿಯಲು ಸಿದ್ಧ.