ಹೋಟೆಲ್ ಸ್ಟೈಲ್ ರವೆ ಇಡ್ಲಿ
ರುಚಿಕರವಾದ ರವೆ ಇಡ್ಲಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ರವೆ – 1 ಬಟ್ಟಲು
- ಮೊಸರು – 1 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಅಡುಗೆ ಎಣ್ಣೆ – 2 ಚಮಚ
- ಬೇಕಿಂಗ್ ಸೋಡಾ – ಸ್ವಲ್ಪ
ಮಾಡುವ ವಿಧಾನ...
- ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣ 10-15 ನಿಮಿಷ ನೆನೆಯಲು ಬಿಡಿ.
- ನಂತರ ಇಡ್ಲಿ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಿ.
- ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ. ಸ್ಟೀಮರ್ನಲ್ಲಿ ನೀರನ್ನು ಮೊದಲು ಸ್ವಲ್ಪ ಕುದಿಸಿ ಅದರಲ್ಲಿ ಇಡ್ಲಿಗಳನ್ನು ಸುಮಾರು 14-15 ನಿಮಿಷಗಳ ಕಾಲ ಬೇಯಲು ಬಿಡಿ. ಇದೀಗ ಹೋಟೆಲ್ ಸ್ಟೈಲ್ ರವೆ ಇಡ್ಲಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.