ಜೀರಿಗೆಯನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಬ್ಲೆಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ದೊಡ್ಡ ಜಗ್ ತೆಗೆದುಕೊಂಡು ಅದರಲ್ಲಿ ನಾಲ್ಕಾರು ಐಸ್ ಕ್ಯೂಬ್ಸ್ ಹಾಕಿ. ತುರಿದ ಶುಂಠಿಯನ್ನು ಬೆರೆಸಿ. ರುಬ್ಬಿಕೊಂಡ ಸೊಪ್ಪಿನ ಮಿಶ್ರಣವನ್ನೂ ಹಾಕಿಕೊಳ್ಳಿ.
ಬಳಿಕ ಜೀರಿಗೆ ಪುಡಿ, ಆಮ್ ಚೂರ್ ಪೌಡರ್, ಉಪ್ಪು, 2 ಗ್ಲಾಸ್ ನಷ್ಟು ನೀರು, ನಿಂಬೆ ರಸ, ಕಾಳುಮೆಣಸಿನ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪು, ಹುಳಿ ಸರಿಯಾಗಿದೆಯಾ ಎಂದು ಪರೀಕ್ಷಿಸಿ, ಅಗತ್ಯವೆನಿಸಿದರೆ, ಮತ್ತಷ್ಟು ಸೇರಿಸಿ. ಬಳಿಕ ಗ್ಲಾಸ್ ಗೆ ಹಾಕಿ ಒಂದೆರಡು ಐಸ್ ಕ್ಯೂಬ್ಸ್ ಬೆರೆಸಿ ಸರ್ವ್ ಮಾಡಿ.