ಸಿಹಿ ಗೆಣಸಿನ ಹೋಳಿಗೆ 
ಅಡುಗೆ

ಸಿಹಿ ಗೆಣಸಿನ ಹೋಳಿಗೆ- sweet potato holige recipe in Kannada

ರುಚಿಕರವಾದ ಸಿಹಿ ಗೆಣಸಿನ ಹೋಳಿಗೆ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಗೆಣಸು- ಅರ್ಧ ಕೆಜಿ

  • ತೊಗರಿಬೇಳೆ- 1 ಕೆಜಿ

  • ಬೆಲ್ಲ- 750 ಗ್ರಾಂ

  • ಮೈದಾ ಹಿಟ್ಟು- ಅರ್ಧ ಕೆಜಿ

  • ಎಣ್ಣೆ- ಸ್ವಲ್ಪ

  • ಅರಿಶಿಣ-ಸ್ವಲ್ಪ

  • ಏಲಕ್ಕಿ ಪುಡಿ-ಸ್ವಲ್ಪ

ಮಾಡುವ ವಿಧಾನ...

  • ಮೈದಾಹಿಟ್ಟಿಗೆ ಒಂದು ಸ್ಪೂನ್ ಅರಿಶಿಣ ಸೇರಿಸಿ, ಎಣ್ಣೆ ಹಾಕಿ ಕಣಕದ ಹದಕ್ಕೆ ಕಲಸಿಟ್ಟುಕೊಳ್ಳಿ.

  • ಗೆಣಸು ತೊಳೆದು ಬೇಯಿಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಿ. ಬಳಿಕ ಬೇಳೆಯನ್ನು ಮೆದುವಾಗಿ ಬೇಯಿಸಿ, ನೀರು ತೆಗೆದು ಬೇಳೆಗೆ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕುದಿಸಿ.

  • ಬಳಿಕ ಬೆಂದ ಬೇಳೆ, ಗೆಣಸನ್ನು ಒಟ್ಟಿಗೆ ನುಣ್ಣಗೆ ಉಂಡೆ ಕಟ್ಟಲು ಬರುವಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಹೂರಣವನ್ನು ಲಿಂಬು ಗಾತ್ರ ಮಾಡಿಕೊಂಡು ಕಣಕದಲ್ಲಿ ತುಂಬಿ ಬಾಳೆ ಎಲೆಯ ಮೇಲಿಟ್ಟು ಎಣ್ಣೆ ಹಾಕಿ ನಿಧಾನಕ್ಕೆ ಲಟ್ಟಿಸಿ.

  • ನಂತರ ಒಲೆಯ ಮೇಲೆ ತವದ ಇಟ್ಟು ಚಿಕ್ಕ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿ. ಇದೀಗ ರುಚಿಕರವಾದ ಸಿಹಿ ಗೆಣಸಿನ ಹೋಳಿಗೆ ಸವಿಯಲು ಸಿದ್ಧ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT