ಮೊಸರು ಅವಲಕ್ಕಿ
ರುಚಿಕರವಾದ ಮೊಸರು ಅವಲಕ್ಕಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಮೀಡಿಯಂ ಅವಲಕ್ಕಿ-ಅರ್ಧ ಪಾವು
- ಮೊಸರು-1 ಪಾವು
- ಕಾಯಿತುರಿ-1 ಹಿಡಿ
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಜಜ್ಜಿದ ಹಸಿ ಶುಂಠಿ- ಸ್ವಲ್ಪ
- ಹಸಿ ಮೆಣಸಿನಕಾಯಿ ಪೇಸ್ಟ್-1 ಚಮಚ
- ಉಪ್ಪು-ರುಚಿಗೆ ತಕ್ಕಷ್ಟು
- ದಾಳಿಂಬೆ ಬೀಜ-1 ಹಿಡಿ
- ಒಗ್ಗರಣೆಗೆ ಇಂಗು
- ಸಾಸಿವೆ- ಸ್ವಲ್ಪ
- ಜೀರಿಗೆ- ಸ್ವಲ್ಪ
- ಉದ್ದಿನ ಬೇಳೆ, ಕಡ್ಲೆಬೇಳೆ-ಸ್ವಲ್ಪ
ಮಾಡುವ ವಿಧಾನ...
- ಅವಲಕ್ಕಿಯನ್ನು ಮೆತ್ತಗಾಗುವಷ್ಟು ಮಾತ್ರ ನೀರಲ್ಲಿ ನೆನೆಸಿಡಿ. ಒಂದು ಪಾತ್ರೆಗೆ ಅವಲಕ್ಕಿ ಹಾಕಿ. ಬಾಣಲೆಗೆ ಮೇಲೆ ಹೇಳಿದ ಒಗ್ಗರಣೆ ಸಾಮಗ್ರಿಗಳನ್ನು ಸ್ವಲ್ಪ ತುಪ್ಪಕ್ಕೆ ಹಾಕಿ ಒಗ್ಗರಿಸಿಕೊಂಡು ಅವಲಕ್ಕಿ ಮೇಲೆ ಹಾಕಿ.
- ನಂತರ ಉಪ್ಪು, ಕಾಯಿತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಶುಂಠಿ ಸಹ ಹಾಕಿ ಗಟ್ಟಿ ಮೊಸರನ್ನು ಮತ್ತು ದಾಳಿಂಬೆ ಬೀಜವನ್ನು ಹಾಕಿ ಚೆನ್ನಾಗಿ ಕಲೆಸಿದರೆ, ರುಚಿಕರವಾದ ಮೊಸರಿನ ಅವಲಕ್ಕಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.