ನಿಂಬೆ ಚಟ್ನಿ
ರುಚಿಕರವಾದ ನಿಂಬೆ ಚಟ್ನಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ನಿಂಬೆಹಣ್ಣು-2
- ಹಸಿ ಅರಿಶಿಣ ಚೂರುಗಳು 7-8
- ಕೆಂಪು ಮೆಣಸಿನ ಕಾಯಿ-5
- ಬಿಳಿ ಕಾಳು ಮೆಣಸು-1 ಚಮಚ
- ಕಾಯಿತುರಿ-1 ಬಟ್ಟಲು
- ಹುಣಿಸೇಹಣ್ಣು- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಬೆಲ್ಲ- ಸ್ವಲ್ಪ
ಮಾಡುವ ವಿಧಾನ...
- ನಿಂಬೆಹಣ್ಣಿನ ಹೋಳುಗಳು, ಮೆಣಸಿನಕಾಳು, ಕೆಂಪು ಮೆಣಸಿನ ಕಾಯಿ, ಕಾಯಿತುರಿ, ಹುಣಿಸೇಹಣ್ಣು, ಅರಿಶಿಣ ಚೂರು ಮತ್ತು ಉಪ್ಪು, ಬೆಲ್ಲ ಎಲ್ಲವನ್ನೂ ಒಟ್ಟಾಗಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ.
- ಈ ಚಟ್ನಿಯನ್ನು ಒಂದು ಬಾಣಲೆಗೆ ಹಾಕಿ ಒಲೆಯ ಮೇಲಿಟ್ಟು 5-10 ನಿಮಿಷ ಬಿಸಿ ಮಾಡಿ. ಇದೀಗ ರುಚಿಕರವಾದ ನಿಂಬೆಹಣ್ಣಿನ ಚಟ್ನಿ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.