ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗಾದ ಬಳಿಕ ಸಣ್ಣಗೆ ಹೆಚ್ಚಿದ ಸೊಪ್ಪುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಮಾಡಿ.
ನಂತರ ಉಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಗೂ ಬೇಯಿಸಿದ್ದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ನೀರು ಹಾಕಬಾರದು. ಏಕೆಂದರೆ ಸೊಪ್ಪಿನಲ್ಲಿ ನೀರಿನ ಅಂಶವಿರುತ್ತದೆ.
ನಂತರ ಪಾಟೀಸ್ ತರ ಮಾಡಿಕೊಂಡು ಸಣ್ಣ ರವೆಯಲ್ಲಿ ಅದ್ದಿ ಕಾದ ತವೆಯಲ್ಲಿ ಒಟ್ಟಿಗೆ 6, 7 ಪಾಟೀಸನ್ನು 2,3 ಚಮಚ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಮೆಂತ್ಯ ಸೊಪ್ಪಿನ ಕಟ್ಲೆಟ್ ಸವಿಯಲು ಸಿದ್ಧ.