ಬೀಟ್ರೂಟ್ ಕಬಾಬ್- Beetroot Kebab Recipe in Kannada
ರುಚಿಕರವಾದ ಬೀಟ್ರೂಟ್ ಕಬಾಬ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
ಬೀಟ್ರೂಟ್- 2
ರವೆ- 3 ಚಮಚ
ಈರುಳ್ಳಿ- 1 ದೊಡ್ಡ ಗಾತ್ರದ್ದು
ಶೆಜ್ವಾನ್ ಸಾಸ್- 2 ಚಮಚ
ಆಲೂಗಡ್ಡೆ- 2
ಮೈದಾ ಹಿಟ್ಟು- 1 ಬಟ್ಟಲು
ಅಕ್ಕಿ ಹಿಟ್ಟು- 4 ಚಮಚ
ಕಡಲೆಹಿಟ್ಟು- 4 ಚಮಚ
ಕಾರ್ನ್ ಫ್ಲೋರ್- 4 ಚಮಚ
ಕೊತ್ತೊಂಬರಿ ಸೊಪ್ಪು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಜೀರಿಗೆ- ಒಂದು ಚಮಚ ಜೀರಿಗೆ
ಎಣ್ಣೆ - ಕರಿಯಲು
ಬೆಣ್ಣೆ- 1 ಚಮಚ
ಮಾಡುವ ವಿಧಾನ...
ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು, ಪೇಸ್ಟ್ ರೀತಿ ಮಾಡಿ. ಇದಕ್ಕೆ ತುರಿದ ಬೀಟ್ರೂಟ್ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 15-20 ನಿಮಿಷ ಬಿಡಿ
ನಂತರ ಅದಕ್ಕೆ ರವಾ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಜೀರಿಗೆ ಹಾಗೂ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಚಿಕ್ಕಚಿಕ್ಕ ಉಂಡೆ ಮಾಡಿ (ಕಬಾಬ್ ರೀತಿಯಲ್ಲಿ) ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಇದೀಗ ರುಚಿಕರವಾದ ಬೀಟ್ರೂಟ್ ಕಬಾಬ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.