ಆಲೂ ಕಬಾಬ್ 
ಅಡುಗೆ

ಆಲೂ ಕಬಾಬ್ | Aloo Kabab Recipe in Kannada

ರುಚಿಕರವಾದ ಆಲೂ ಕಬಾಬ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು..

  • ಆಲೂಗಡ್ಡೆ- 3

  • ಅಚ್ಚ ಖಾರದ ಪುಡಿ- 2 ಚಮಚ

  • ಕಬಾಬ್ ಪುಡಿ- 1 ಚಮಚ

  • ಮೈದಾ ಹಿಟ್ಟು- 4 ಚಮಚ

  • ಅಕ್ಕಿ ಹಿಟ್ಟು- 2 ಚಮಚ

  • ಕಾರ್ನ್ ಫ್ಲೋರ್- 1 ಚಮಚ

  • ಅರಿಶಿಣದ ಪುಡಿ- ಸ್ವಲ್ಪ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ

  • ಉಪ್ಪು-ರುಚಿಗೆ ತಕ್ಕಷ್ಟು

  • ಎಣ್ಣೆ- ಕರಿಯಲು

ಮಾಡುವ ವಿಧಾನ...

  • ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ಪಾತ್ರ ಇಟ್ಟು ನೀರು ಹಾಕಿ ಆಲೂಗಡ್ಡೆಗಳನ್ನು ಹಾಕಿ 2-3 ನಿಮಿಷ ಬೇಯಿಸಿ, ಆಲೂಗಡ್ಡೆಯನ್ನು ತೆಗೆದಿಟ್ಟುಕೊಳ್ಳಿ.

  • ನಂತರ ಮತ್ತೊಂದು ಪಾತ್ರೆಯಲ್ಲಿ ಮೈದಾ ಹಿಟ್ಟು. ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಕಬಾಬ್ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಎಲ್ಲವನ್ನು ಹಾಕಿ ಮಿಶ್ರಣ ಮಾಡಿ.

  • ಬಳಿಕ ಆಲೂಗಡ್ಡೆಯನ್ನು ಹಾಗಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಗಟ್ಟಿಗೆ ಕಲಸಿಕೊಳ್ಳಿ. ಇದೀಗ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಮಸಾಲೆ ಭರಿತ ಆಲೂವನ್ನು ಒಂದಾದಾಗಿ ಹಾಕಿ, ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಆಲೂ ಕಬಾಬ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ