ಬೇಕಾಗುವ ಪದಾರ್ಥಗಳು...
ಕ್ಯಾರೆಟ್- ತುರಿದದ್ದು 1 ಬಟ್ಟಲು
ದ್ರಾಕ್ಷಿ- ಸ್ವಲ್ಪ
ಗೋಡಂಬಿ-ಸ್ವಲ್ಪ
ತುಪ್ಪ- 2 ಚಿಕ್ಕ ಬಟ್ಟಲು
ಹಾಲು - 2 ಬಟ್ಟಲು
ಕಂಡೆನ್ಸ್ಡ್ ಮಿಲ್ಕ್- 1 ಬಟ್ಟಲು
ಸಕ್ಕರೆ - 5 ಚಮಚ
ನುಚ್ಚಕ್ಕಿ- 1 ಚಿಕ್ಕ ಬಟ್ಟಲು
ಏಲಕ್ಕಿ- ಸ್ವಲ್ಪ
ಮಾಡುವ ವಿಧಾನ...
ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ. ಕಾದ ದ್ರಾಕ್ಷಿ ಹಾಗೂ ಗೋಂಡಬಿ ಹಾಕಿ ಕೆಂಪಗೆ ಹುರಿದು ಪಕ್ಕಕ್ಕಿಟ್ಟುಕೊಳ್ಳಿ.
ಇದೇ ಪ್ಯಾನ್'ಗೆ ಕ್ಯಾರೆಟ್ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಹಾಲು ಹಾಗೂ ಅರ್ಧ ಗಂಟೆ ನೆನೆಸಿದ ಅಕ್ಕಿಯನ್ನು ಹಾಕಿ 10-20 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಸಕ್ಕರೆ, ಕಂಡೆನ್ಸ್ಡ್ ಮಿಲ್ಕ್, ಏಲಕ್ಕಿ ಪುಡಿ ಹಾಗೂ ಹುರಿದಿಟ್ಟುಕೊಂಡ ದ್ರಾಕ್ಷಿ-ಗೋಡಂಬಿ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಕ್ಯಾರೆಟ್ ರೈಸ್ ಖೀರ್ ಸವಿಯಲು ಸಿದ್ಧ.