ಚಂದ್ರಾಹಾರ  
ಅಡುಗೆ

ಚಂದ್ರಾಹಾರ | Chandrahara Recipe in Kannada

ರುಚಿಕರವಾದ ಚಂದ್ರಾಹಾರ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಮೈದಾ ಹಿಟ್ಟು 2 ಬಟ್ಟಲು

  • ರವೆ-2 ಚಮಚ

  • ಮೊಸರು ½ ಬಟ್ಟಲು

  • ಉಪ್ಪು-ಚಿಟಿಕೆ

  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

  • ಸಕ್ಕರೆ- 2 ಬಟ್ಟಲು

  • ಹಾಲು- 1 ಬಟ್ಟಲು

  • ಏಲಕ್ಕಿ ಪುಡಿ- ½ ಚಮಚ

  • ಬಾದಾಮಿ ಮತ್ತು ಗೋಡಂಬಿ ಚೂರು- ಸ್ವಲ್ಪ

  • ಕೇಸರಿ ದಳ-ಸ್ವಲ್ಪ

ಮಾಡುವ ವಿಧಾನ...

  • ಮೊದಲು ಮೈದಾ ಹಿಟ್ಟು, ರವೆ, ಉಪ್ಪು ಮತ್ತು ಮೊಸರು ಸೇರಿಸಿ ಮೃದುವಾದ ಹಿಟ್ಟು ಕಲಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ. ಹಿಟ್ಟನ್ನು 20–30 ನಿಮಿಷ ನೆನೆಯಲು ಬಿಡಿ.

  • ನೆನೆದ ಹಿಟ್ಟನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ, ತೆಳುವಾದ ಪೂರಿಯಂತೆ ಲಟ್ಟಿಸಿ. ಈ ಪೂರಿಯನ್ನು ತ್ರಿಕೋನ ಅಥವಾ ಚಂದ್ರಾಕೃತಿಯಲ್ಲಿ ಮಡಚಿ ಅಥವಾ ಮಧ್ಯದಲ್ಲಿ ಸಣ್ಣದಾಗಿ ಚುಚ್ಚಿ (ಇದರಿಂದ ಪೂರಿ ಉಬ್ಬುವುದಿಲ್ಲ ಮತ್ತು ಗರಿಗರಿಯಾಗುತ್ತದೆ). ನಂತರ ಬಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ಪಕ್ಕಕ್ಕೆ ಇರಿಸಿ.

  • ಅಗಲವಾದ ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ. ಹಾಲು ಸ್ವಲ್ಪ ದಪ್ಪಗಾದ ನಂತರ ಅದಕ್ಕೆ ಸಕ್ಕರೆ, ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಈ ಹಾಲು ರಬಡಿಯ ಹದಕ್ಕೆ ಬರಬಾರದು, ಬದಲಿಗೆ ಹಾಲಿನ ಪಾಯಸದ ಹದಕ್ಕೆ ಇರಬೇಕು.

  • ಒಂದು ಬಟ್ಟಲಿನಲ್ಲಿ ಕರಿದ ಪೂರಿಯನ್ನು ಇಟ್ಟು ಅದರ ಮೇಲೆ ಬಿಸಿ ಬಿಸಿಯಾದ ಹಾಲಿನ ರಸವನ್ನು ಸುರಿಯಿರಿ. ಮೇಲಿನಿಂದ ಹುರಿದ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹಾಕಿದರೆ ರುಚಿಕರವಾದ ಚಂದ್ರಾಹಾರ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈಶಾನ್ಯ ರಾಜ್ಯಗಳು 'ಭಾರತದ ಅಷ್ಟಲಕ್ಷ್ಮಿ'ಯರಿದ್ದಂತೆ, 'Act East', 'Act Fast' ನೀತಿಗೆ ಹೆಚ್ಚಿನ ಒತ್ತು: ಪ್ರಧಾನಿ ಮೋದಿ

Delhi Liquor Scam: ನ್ಯಾ.ಸ್ವರ್ಣ ಕಾಂತ ಶರ್ಮಾ ಮುಂದೆ ವಿಚಾರಣೆಗೆ ಹಾಜರಾಗಲ್ಲ: ಕೇಜ್ರಿವಾಲ್ ಬೆನ್ನಲ್ಲೇ ಕೋರ್ಟ್ ಬಹಿಷ್ಕರಿಸಿದ ಸಿಸೋಡಿಯಾ..!

2013-18 ರಲ್ಲಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ- ಅವರೀಗ ಅಧಿಕಾರ ಬಿಟ್ಟು ಕೊಡೋಕೆ 'ಸಿದ್ಧ'ರಾಮಯ್ಯ: ಕೆ.ಎನ್ ರಾಜಣ್ಣ

ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ಹಿಡಿತ: ಟೆಹ್ರಾನ್ ಷರತ್ತುಗಳಿಗೆ ‘NO’ ಎಂದ ಅಮೆರಿಕಾ; ಸಂದಿಗ್ಧ ಸ್ಥಿತಿಯಲ್ಲಿ ಶಾಂತಿ ಮಾತುಕತೆ

ಟ್ರಂಪ್ ಕೈಗೆ ಗಾಯ, ಬಣ್ಣ ಬದಲಾವಣೆ: ಫೋಟೋ ವೈರಲ್, ಅಮೆರಿಕಾ ಅಧ್ಯಕ್ಷರ ಆರೋಗ್ಯ ಕುರಿತು ಊಹಾಪೋಹ ಶುರು..!

SCROLL FOR NEXT