ಹರಿಯಾಲಿ ಚಿಕನ್ 
ಅಡುಗೆ

ಹರಿಯಾಲಿ ಚಿಕನ್ | Hariyali Chicken Recipe in Kannada

ಕೊತ್ತಂಬರಿ ಸೊಪ್ಪು, ಪುದೀನಾ, ಮೊಸರು ಹಾಗೂ ಇತರೆ ಮಸಾಲೆ ಪದಾರ್ಥಗಳಿಂದ ತಯಾರಾಗುವ ಹರಿಯಾಲಿ ಚಿಕನ್ ಉತ್ತರ ಭಾರತದ ಜನಪ್ರಿಯ ಖಾದ್ಯವಾಗಿದೆ. ಮಸಾಲೆಯ, ರುಚಿ ಮತ್ತು ಮೃದುವಾದ ಚಿಕನ್‌ನ ಸಂಯೋಜನೆ ಈ ಖಾದ್ಯವನ್ನು ವಿಶೇಷವಾಗಿಸುತ್ತದೆ.

ಕೊತ್ತಂಬರಿ ಸೊಪ್ಪು, ಪುದೀನಾ, ಮೊಸರು ಹಾಗೂ ಇತರೆ ಮಸಾಲೆ ಪದಾರ್ಥಗಳಿಂದ ತಯಾರಾಗುವ ಹರಿಯಾಲಿ ಚಿಕನ್ ಉತ್ತರ ಭಾರತದ ಜನಪ್ರಿಯ ಖಾದ್ಯವಾಗಿದೆ. ಮಸಾಲೆಯ, ರುಚಿ ಮತ್ತು ಮೃದುವಾದ ಚಿಕನ್‌ನ ಸಂಯೋಜನೆ ಈ ಖಾದ್ಯವನ್ನು ವಿಶೇಷವಾಗಿಸುತ್ತದೆ. ಇದು ರೊಟ್ಟಿ, ನಾನ್, ಕುಲ್ಚಾ ಅಥವಾ ಜೀರಾ ರೈಸ್ ಜೊತೆಗೆ ಸವಿಯಲು ಅತ್ಯುತ್ತಮ ಆಯ್ಕೆಯಾಗಿದೆ. ಮನೆಯಲ್ಲೇ ಈ ಖಾದ್ಯವನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ...

ಬೇಕಾಗುವ ಪದಾರ್ಥಗಳು...

ಮ್ಯಾರಿನೇಟ್ ಮಾಡಲು

  • ಚಿಕನ್ – 500 ಗ್ರಾಂ

  • ಮೊಸರು – ½ ಬಟ್ಟಲು

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1½ ಚಮಚ

  • ಅರಿಶಿಣ – ¼ ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ನಿಂಬೆ ರಸ – 1 ಚಮಚ

ಹರಿಯಾಲಿ ಪೇಸ್ಟ್‌ಗೆ

  • ಕೊತ್ತಂಬರಿ ಸೊಪ್ಪು – 1 ಬಟ್ಟಲು

  • ಪುದೀನಾ ಸೊಪ್ಪು – ½ ಬಟ್ಟಲು

  • ಹಸಿಮೆಣಸಿನಕಾಯಿ – 3

  • ಗೋಡಂಬಿ – 8 ರಿಂದ 10

  • ಜೀರಿಗೆ – 1 ಚಮಚ

  • ಕಾಳುಮೆಣಸು – ½ ಚಮಚ

ಅಡುಗೆಗೆ

  • ಎಣ್ಣೆ ಅಥವಾ ತುಪ್ಪ – 2 ಚಮಚ

  • ಈರುಳ್ಳಿ – 2 (ಸಣ್ಣಗೆ ಕತ್ತರಿಸಿದ)

  • ಗರಂ ಮಸಾಲೆ – 1 ಚಮಚ

  • ಕಸೂರಿ ಮೆಂತ್ಯೆ – 1 ಚಮಚ (ಐಚ್ಛಿಕ)

  • ಫ್ರೆಶ್ ಕ್ರೀಮ್ – 2 ಚಮಚ (ಐಚ್ಛಿಕ)

ಮಾಡುವ ವಿಧಾನ...

  • ಮೊದಲು ಚಿಕನ್‌ಗೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಿಶಿಣ ಮತ್ತು ನಿಂಬೆ ರಸ ಸೇರಿಸಿ 30–45 ನಿಮಿಷ ಮ್ಯಾರಿನೇಟ್ ಮಾಡಿ.

  • ಕೊತ್ತಂಬರಿ ಸೊಪ್ಪು, ಪುದೀನಾ, ಹಸಿಮೆಣಸಿನಕಾಯಿ, ಗೋಡಂಬಿ, ಜೀರಿಗೆ ಮತ್ತು ಕಾಳುಮೆಣಸನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಹರಿಯಾಲಿ ಪೇಸ್ಟ್ ತಯಾರಿಸಿ.

  • ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿಯನ್ನು ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ರುಬ್ಬಿದ ಹರಿಯಾಲಿ ಪೇಸ್ಟ್ ಸೇರಿಸಿ 3–4 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.

  • ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಹಾಕಿ 20–25 ನಿಮಿಷ ಅಥವಾ ಚಿಕನ್ ಸಂಪೂರ್ಣ ಬೇಯಿಸಿ.

  • ನಂತರ ಗರಂ ಮಸಾಲೆ, ಕಸೂರಿ ಮೆಂತ್ಯೆ ಮತ್ತು ಬೇಕಾದರೆ ಕ್ರೀಮ್ ಸೇರಿಸಿ 2 ನಿಮಿಷ ಬೇಯಿಸಿ.

  • ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಕರವಾದ ಹರಿಯಾಲಿ ಚಿಕನ್ ಸವಿಯಲು ಸಿದ್ಧ.

ಟಿಪ್ಸ್...

  • ಉತ್ತಮ ರುಚಿಗಾಗಿ ಚಿಕನ್ ಅನ್ನು ಕನಿಷ್ಠ 1 ಗಂಟೆ ಮ್ಯಾರಿನೇಟ್ ಮಾಡಿ.

  • ಗ್ರೇವಿ ಹೆಚ್ಚು ಬೇಕಾದರೆ ಸ್ವಲ್ಪ ಬಿಸಿ ನೀರು ಸೇರಿಸಬಹುದು.

  • ಗೋಡಂಬಿ ಬದಲಿಗೆ ಬಾದಾಮಿ ಬಳಸಬಹುದು.

  • ಚಾರ್ಕೋಲ್ ಧೂಂಗರ್ ನೀಡಿದರೆ ರೆಸ್ಟೋರೆಂಟ್ ಶೈಲಿಯ ಸುವಾಸನೆ ಸಿಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!