ಬೇಕಾಗುವ ಪದಾರ್ಥಗಳು...
ದೊಡ್ಡಪತ್ರೆ ಎಲೆಗಳು – 1 ಬಟ್ಟಲು (ತೊಳೆದು ಸಣ್ಣದಾಗಿ ಕತ್ತರಿಸಿದುದು)
ತೊಗರಿ ಬೇಳೆ – 1/2 ಬಟ್ಟಲು
ಅಕ್ಕಿ – 1 ಟೇಬಲ್ ಚಮಚ
ಅರಿಶಿನ – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – 3 ಬಟ್ಟಲು
ತುಪ್ಪ ಅಥವಾ ಎಣ್ಣೆ – 1 ಚಮಚ
ಒಗ್ಗರಣೆಗೆ
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಕರಿಬೇವು – ಸ್ವಲ್ಪ
ಒಣ ಮೆಣಸಿನಕಾಯಿ – 2
ಬೆಳ್ಳುಳ್ಳಿ – 4–5 ಎಸಳು
ಮಾಡುವ ವಿಧಾನ...
ತೊಗರಿ ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ 2 ಕಪ್ ನೀರು ಸೇರಿಸಿ 3–4 ವಿಷಲ್ ಬರುವವರೆಗೆ ಬೇಯಿಸಿ. ಬೆಂದ ನಂತರ ಅದನ್ನು ಸ್ಮ್ಯಾಷ್ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ.
ಇದಕ್ಕೆ ಕತ್ತರಿಸಿದ ದೊಡ್ಡಪತ್ರೆ ಎಲೆಗಳನ್ನು ಹಾಕಿ 2–3 ನಿಮಿಷ ಹುರಿಯಿರಿ. ಈಗ ಬೇಯಿಸಿದ ಬೇಳೆ ಮಿಶ್ರಣ ಸೇರಿಸಿ. ಉಪ್ಪು ಮತ್ತು ಅರಿಶಿನ ಹಾಕಿ ಚೆನ್ನಾಗಿ ಕುದಿಯಲು ಬಿಡಿ.
5–7 ನಿಮಿಷ ಕುದಿಸಿದ ನಂತರ ತೊವ್ವೆ ಗಟ್ಟಿಯಾಗಿದರೆ ಸ್ವಲ್ಪ ನೀರು ಸೇರಿಸಿ ಸರಿಪಡಿಸಿ. ಬಿಸಿ ಬಿಸಿ ಸರ್ವ್ ಮಾಡಿ.