ಲಾ ಫೋನ್ 
ಗ್ಯಾಡ್ಜೆಟ್ಸ್

ಕಡಿಮೆ ಬೆಲೆಯ ಲಾವಾ ಸ್ಮಾರ್ಟ್ ಫೋನ್! ಬೆಲೆ ಎಷ್ಟು ಗೊತ್ತೇ? 

ದೇಶಿಯ ಮೊಬೈಲ್ ಉತ್ಪಾದಕ ಸಂಸ್ಥೆ ಲಾವಾ, ಜು.09 ರಂದು ಪ್ರಾರಂಭಿಕ ಹಂತದ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದ್ದು ಸಂಸ್ಥೆಯ ಝೇಡ್ ಸರಣಿಗೆ ಮತ್ತೊಂದು ಮೊಬೈಲ್ ಸೇರ್ಪಡೆಯಾಗಿದೆ.

ದೇಶಿಯ ಮೊಬೈಲ್ ಉತ್ಪಾದಕ ಸಂಸ್ಥೆ ಲಾವಾ, ಜು.09 ರಂದು ಪ್ರಾರಂಭಿಕ ಹಂತದ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದ್ದು ಸಂಸ್ಥೆಯ ಝೇಡ್ ಸರಣಿಗೆ ಮತ್ತೊಂದು ಮೊಬೈಲ್ ಸೇರ್ಪಡೆಯಾಗಿದೆ.

ಝೆಡ್ 61 ಹೊಸ ಸ್ಮಾರ್ಟ್ ಫೋನ್ ಆಗಿದ್ದು, 1.6GHz ಆಕ್ಟಾಕೋರ್ ಪ್ರೊಸೆಸರ್, 2 ಜಿಬಿ RAM, 16 ಜಿಬಿ (128 ಜಿಬಿವರೆಗೆ ವಿಸ್ತರಿಸಬಹುದಾದ) ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 

ಲಾವ ಝೆಡ್ 61 ನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಿಸಲಾಗಿದೆ. ಪ್ರಾರಂಭಿಕ ದರದ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಹಾಗೂ ಆಕರ್ಷಕ ಲುಕ್ ಹೊಂದಿದ್ದು, ಮನರಂಜನಾ ಅಗತ್ಯತೆಗಳಿಗೆ ಅತ್ಯುತ್ತಮವಾದ ಫೋನ್ ಇದಾಗಿದೆ ಎಂದು ಲಾವಾ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥ ತೇಜೇಂದರ್ ಸಿಂಗ್ ಹೇಳಿದ್ದಾರೆ. 

5.45-inch HD+ ಡಿಸ್ಪ್ಲೇ, ಮಿಡ್ ನೈಟ್ ಬ್ಲೂ ಹಾಗೂ ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. 5 ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರಾ, 8 ಮೆಗಾ ಪಿಕ್ಸಲ್ ಹಿಂಭಾಗದ ಕ್ಯಾಮರಾವನ್ನು ಝೆಡ್-61 ಹೊಂದಿದೆ. 3100 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಇದರ ಬೆಲೆಯನ್ನು  Rs 5,774 ರೂಗಳಿಗೆ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NCERT Row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

SCROLL FOR NEXT