ಗ್ಯಾಡ್ಜೆಟ್ಸ್

ಸೆಲ್ಫಿಯಲ್ಲಿ ಹೀಗೆ V ತೋರಿಸ್ತೀರಾ? ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗಬಹುದು; ಒಂದು ಸೆಲ್ಫಿಯಿಂದ ಲಕ್ಷ ಲಾಸ್ ಫಿಕ್ಸ್!

ಸೆಲ್ಫಿ ತೆಗೆದಾಗ ಎಲ್ಲರೂ V ಅಂದರೆ ವಿಕ್ಟರಿ ಸೈನ್ ತೋರಿಸ್ತಾರೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ನಲ್ಲಿ ಈ ಫೋಟೋಗಳು ಕಾಮನ್. ಆದರೆ ಇದೇ V ಸೈನ್ ಸೆಲ್ಫಿಯಿಂದ ಲಕ್ಷಾಂತರ ರೂಪಾಯಿ ಕಳ್ಳತನವಾಗಬಹುದು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಸೆಲ್ಫಿಯಲ್ಲಿ ಹೀಗೆ V ತೋರಿಸ್ತೀರಾ? ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗಬಹುದು; ಒಂದು ಸೆಲ್ಫಿಯಿಂದ ಲಕ್ಷ ಲಾಸ್ ಫಿಕ್ಸ್!
ವಿಕ್ಟರಿ ಸೈನ್ ತೋರಿಸಿ ಸೆಲ್ಫಿ ಕ್ಲಿಕ್ಕಿಸ್ತೀರಾ? ನಿಮ್ಮ ಫಿಂಗರ್‌ಪ್ರಿಂಟ್ ಕದ್ದು ಹಣ ಎಗರಿಸಬಹುದು ಹ್ಯಾಕರ್ಸ್! — AI Image
Published On :

ಸೆಲ್ಫಿ ತೆಗೆದಾಗ ಎಲ್ಲರೂ V ಅಂದರೆ ವಿಕ್ಟರಿ ಸೈನ್ ತೋರಿಸ್ತಾರೆ. ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಈ ಫೋಟೋಗಳು ಕಾಮನ್. ಸ್ನೇಹಿತರ ಜೊತೆ ಇರಲಿ, ಒಬ್ಬರೇ ಇರಲಿ, ಟ್ರಿಪ್ ನಲ್ಲಿ ಇರಲಿ, ಫೋಟೋ ತೆಗೆದ ಕೂಡಲೇ ಕೈ ತಾನಾಗಿಯೇ V ಆಕಾರಕ್ಕೆ ಹೋಗುತ್ತದೆ. ಆದರೆ ಇದೇ V ಸೈನ್ ನಿಮ್ಮ ಜೀವನಕ್ಕೆ ಕುತ್ತು ತರಬಹುದು ಅಂತ ಗೊತ್ತಾ.?

ಹೌದು, ಈ ಬಗ್ಗೆ ನಡೆದ ಸಂಶೋಧನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.! ಯಾಕಂದ್ರೆ, ನೀವು ಖುಷಿಯಲ್ಲಿ ತೋರಿಸುವ ಆ ಎರಡು ಬೆರಳುಗಳಲ್ಲೇ ನಿಮ್ಮ ಬೆರಳಚ್ಚು ಅಡಗಿದೆ. ಹತ್ತಿರದಿಂದ ತೆಗೆದ ಹೈ ರೆಸಲ್ಯೂಶನ್ ಸೆಲ್ಫಿಯಲ್ಲಿ ನಿಮ್ಮ ಬೆರಳಿನ ರೇಖೆಗಳು ಸ್ಪಷ್ಟವಾಗಿ ಸೆರೆಯಾಗುತ್ತವೆ. ಅದನ್ನೇ ಕಳ್ಳರು ಬಳಸಿಕೊಂಡು ನಕಲಿ ಬೆರಳಚ್ಚು ಮಾಡಿ, ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಬಹುದು ಎಂಬ ಎಚ್ಚರಿಕೆ ಈಗ ದೊಡ್ಡದಾಗಿ ಕೇಳಿಬರುತ್ತಿದೆ. ಹಾಗಾದರೆ ನಿಜಕ್ಕೂ ಒಂದು ಸೆಲ್ಫಿಯಿಂದ ಲಕ್ಷಾಂತರ ರೂಪಾಯಿ ಮಾಯವಾಗುತ್ತಾ? ಆ ಕುರಿತ ವರದಿ ಇಲ್ಲಿದೆ:

V ತೋರಿಸಿದರೆ ಬೆರಳಚ್ಚು ಹೇಗೆ ಕದಿಯುತ್ತಾರೆ?

ನೀವು ಕ್ಯಾಮೆರಾ ಮುಂದೆ V ತೋರಿಸಿದಾಗ ನಿಮ್ಮ ಬೆರಳಿನ ಮುಂಭಾಗದ ಫಿಂಗರ್ ಪ್ರಿಂಟ್ HD ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗುತ್ತದೆ. ಈಗಿನ ಮೊಬೈಲ್ ಕ್ಯಾಮೆರಾಗಳು 100 ಮೆಗಾಪಿಕ್ಸೆಲ್, ಜೊತೆಗೆ AI ಟೂಲ್ ಇದೆ. ಹ್ಯಾಕರ್ಸ್ ಫೋಟೋವನ್ನು ಜೂಮ್ ಮಾಡಿ, AI ನಿಂದ ಫಿಂಗರ್ ಪ್ರಿಂಟ್ ಅನ್ನು ರೀಕ್ರಿಯೇಟ್ ಮಾಡುತ್ತಾರೆ. 2019 ರಲ್ಲಿ ಜಪಾನ್ ನ ರಿಸರ್ಚ್ ತಂಡ 3 ಮೀಟರ್ ದೂರದಿಂದ ತೆಗೆದ V ಸೆಲ್ಫಿಯಿಂದಲೇ ಫಿಂಗರ್ ಪ್ರಿಂಟ್ ಕದಿಯಬಹುದು ಅಂತ ತೋರಿಸಿತ್ತು.

ಬೆರಳಚ್ಚು ಸಿಕ್ಕರೆ ಏನು ಲಾಸ್ ಆಗುತ್ತೆ?

ಇವತ್ತು ಎಲ್ಲವೂ ಬಯೋಮೆಟ್ರಿಕ್. ಫೋನ್ ಲಾಕ್, ಬ್ಯಾಂಕ್ ಆಪ್ ಲಾಗಿನ್, ಆಧಾರ್ ಅಥೆಂಟಿಕೇಷನ್, ಹಾಜರಾತಿ ಎಲ್ಲವೂ ಫಿಂಗರ್ ಪ್ರಿಂಟ್ ಮೇಲಿದೆ. ನಿಮ್ಮ ಫಿಂಗರ್ ಪ್ರಿಂಟ್ ಸಿಕ್ಕರೆ ಅವರು ನಕಲಿ ಫಿಂಗರ್ ಪ್ರಿಂಟ್ ಸಿಲಿಕಾನ್ ನಿಂದ ಮಾಡಿ ನಿಮ್ಮ ಫೋನ್, ಬ್ಯಾಂಕ್ ಆಪ್ ಓಪನ್ ಮಾಡಬಹುದು. ನಿಮ್ಮ ಹೆಸರಲ್ಲಿ ಸಿಮ್ ತೆಗೆದು ಲೋನ್ ತೆಗೆದುಕೊಳ್ಳಬಹುದು. ಇದನ್ನೇ ಬಯೋಮೆಟ್ರಿಕ್ ಹ್ಯಾಕಿಂಗ್ ಅಂತಾರೆ.

ಯಾರು ಟಾರ್ಗೆಟ್ ಆಗ್ತಾರೆ?

ಹೆಚ್ಚಾಗಿ ಇನ್‌ಸ್ಟಾ, ಫೇಸ್‌ಬುಕ್ ನಲ್ಲಿ ಪಬ್ಲಿಕ್ ಅಕೌಂಟ್ ಇಟ್ಟು, HD ಫೋಟೋ ಹಾಕುವವರೇ ಟಾರ್ಗೆಟ್. ಸೆಲೆಬ್ರಿಟಿಗಳು, ಇನ್‌ಫ್ಲುಯೆನ್ಸರ್ ಗಳು, ಬ್ಯಾಂಕ್ ಉದ್ಯೋಗಿಗಳು ಹೆಚ್ಚು ರಿಸ್ಕ್ ನಲ್ಲಿರುತ್ತಾರೆ. ನಿಮ್ಮ ಫೋಟೋ ವೈರಲ್ ಆದರೆ ಹ್ಯಾಕರ್ಸ್ ಕಣ್ಣಿಗೆ ಬೀಳುವುದು ಸುಲಭ.

ಸುರಕ್ಷಿತವಾಗಿ ಸೆಲ್ಫಿ ತೆಗೆಯೋದು ಹೇಗೆ?

V ತೋರಿಸಲೇ ಬೇಕು ಅಂದರೆ ಬೆರಳಿನ ಮುಂಭಾಗ ಕ್ಯಾಮೆರಾಗೆ ಕಾಣದಂತೆ ಸ್ವಲ್ಪ ಓರೆ ಮಾಡಿ ತೋರಿಸಿ. ಉಗುರಿನ ಭಾಗ ಮಾತ್ರ ಕಾಣುವಂತೆ ತೋರಿಸಿ. ಫೋಟೋ ಹಾಕುವಾಗ HD ಕ್ವಾಲಿಟಿ ಬೇಡ, ಸ್ವಲ್ಪ ರೆಸಲ್ಯೂಶನ್ ಕಡಿಮೆ ಮಾಡಿ ಹಾಕಿ. ಫೋಟೋಗೆ ಬ್ಲರ್ ಎಫೆಕ್ಟ್ ಹಾಕಿ. ಅತಿ ಮುಖ್ಯವಾಗಿ ಬ್ಯಾಂಕ್ ಆಪ್ ಗಳಿಗೆ ಕೇವಲ ಫಿಂಗರ್ ಪ್ರಿಂಟ್ ಅಲ್ಲ, ಪಿನ್ + ಫೇಸ್ ಲಾಕ್ ಕೂಡ ಹಾಕಿ.

ಈ ತಪ್ಪುಗಳನ್ನು ಮಾಡಬೇಡಿ

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚೆಕ್ ಬುಕ್ ಜೊತೆ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ. ಯಾವುದೇ ಅಪರಿಚಿತ ಲಿಂಕ್ ಗೆ ಫಿಂಗರ್ ಪ್ರಿಂಟ್, ಫೇಸ್ ಸ್ಕ್ಯಾನ್ ಕೊಡಬೇಡಿ. ನಿಮ್ಮ ಫೋಟೋದಿಂದ ಯಾರಾದರೂ ಫಿಂಗರ್ ಪ್ರಿಂಟ್ ಕದ್ದಿದ್ದಾರೆ ಅನಿಸಿದರೆ ತಕ್ಷಣ ಸೈಬರ್ ಕ್ರೈಂ 1930 ಗೆ ಕರೆ ಮಾಡಿ, ಬ್ಯಾಂಕ್ ಗೆ ತಿಳಿಸಿ.

ಒಟ್ಟಾರೆಯಾಗಿ, ಒಂದು ಸೆಲ್ಫಿ ಒಂದು ಲೈಕ್ ಗಾಗಿ ನಿಮ್ಮ ಜೀವನದ ಸೇವಿಂಗ್ಸ್ ಕಳೆದುಕೊಳ್ಳಬೇಡಿ. ಸೆಲ್ಫಿ ತೆಗೆಯಿರಿ, ಆದರೆ ಬುದ್ಧಿವಂತಿಕೆಯಿಂದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.