ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂ ಬಂದ್! ಸೈಬರ್ ವಂಚನೆ ತಡೆಗೆ ಬಂತು ಕಠಿಣ ರೂಲ್ಸ್: ಕೇಂದ್ರದಿಂದ ಸಿಮ್ ಬೈಂಡಿಂಗ್ ನಿಯಮ ಜಾರಿ!

ಸೈಬರ್ ವಂಚನೆ ಮತ್ತು ನಕಲಿ ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಜನವರಿ 1ರಿಂದ ಜಾರಿಗೆ ಬರಲಿರುವ ಸಿಮ್ ಬೈಂಡಿಂಗ್ ಪ್ರಕಾರ ಸಕ್ರಿಯ ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಮತ್ತು ಟೆಲಿಗ್ರಾಂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಆ ಕುರಿತ ವರದಿ ಇಲ್ಲಿದೆ:
No Active SIM, No WhatsApp: Centre Mandates SIM Binding to Curb Cyber Fraud
ಕೇಂದ್ರದಿಂದ ಸಿಮ್ ಬೈಂಡಿಂಗ್ ನಿಯಮ ಜಾರಿ!Online Desk
Updated on: 

ನವದೆಹಲಿ: ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರವು ಡಿಜಿಟಲ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದಲ್ಲಿ ಸೈಬರ್ ವಂಚನೆ ಮತ್ತು ನಕಲಿ ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದ್ದು, ಜನವರಿ 1, 2027 ರಿಂದ ಜಾರಿಗೆ ಬರಲಿರುವ ಸಿಮ್ ಬೈಂಡಿಂಗ್ ನಿಯಮಾವಳಿಗಳ ಅನ್ವಯ ಸಕ್ರಿಯ ಸಿಮ್ ಕಾರ್ಡ್ ಇಲ್ಲದೆ ವಾಟ್ಸಾಪ್ ಮತ್ತು ಟೆಲಿಗ್ರಾಂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿವೆ. ಆ ಕುರಿತ ವರದಿ ಇಲ್ಲಿದೆ:

ಹಾಗಾದ್ರೆ ಏನಿದು ಸಿಮ್ ಬೈಂಡಿಂಗ್?

ಇಲ್ಲಿಯವರೆಗೆ, ಯಾವುದೇ ಮೆಸೇಜಿಂಗ್ ಆಪ್‌ನಲ್ಲಿ ಖಾತೆ ತೆರೆಯುವಾಗ ಒನ್-ಟೈಮ್ ಪಾಸ್‌ವರ್ಡ್ (OTP) ಮೂಲಕ ಸಂಖ್ಯೆಯನ್ನು ವೆರಿಫೈ ಮಾಡಿದ ನಂತರ, ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದರೂ ವೈ-ಫೈ ಮೂಲಕ ಆಪ್ ಬಳಸಬಹುದಿತ್ತು. ಆದರೆ ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ, ನೀವು ನೋಂದಾಯಿಸಿದ ಸಕ್ರಿಯ ಸಿಮ್ ಕಾರ್ಡ್ ಆಯಾ ಮೊಬೈಲ್‌ನಲ್ಲೇ ಇರಬೇಕು. ಈ ಮೂಲಕ ಸಿಮ್ ಕಾರ್ಡ್ ತೆಗೆದರೆ ಅಥವಾ ನಿಷ್ಕ್ರಿಯಗೊಂಡರೆ ಆಪ್ ಕೆಲಸ ಮಾಡುವುದಿಲ್ಲ.

ಯಾವೆಲ್ಲಾ ಆಪ್‌ಗಳಿಗೆ ಇದು ಅನ್ವಯ?

ಈ ನಿಯಮವು ಭಾರತದ ಪ್ರಮುಖ ಸಂವಹನ ವೇದಿಕೆಗಳಾದ ವಾಟ್ಸಾಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಸೇರಿದಂತೆ ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್, ಜೋಶ್ ಮತ್ತು ಅರಟ್ಟೈ ಆಪ್‌ಗಳಿಗೂ ಅನ್ವಯಿಸಲಿದೆ. ಅದರಂತೆ, ತಾಂತ್ರಿಕ ಸಿದ್ಧತೆಗಳಿಗಾಗಿ ಕಂಪನಿಗಳಿಗೆ ಡಿಸೆಂಬರ್ 31, 2026 ರವರೆಗೆ ಗಡುವು ನೀಡಲಾಗಿದೆ.

ಯಾರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ?

  • ದ್ವಿತೀಯ ಫೋನ್‌ಗಳ ಬಳಕೆದಾರರು: ಒಂದು ಫೋನ್‌ನಲ್ಲಿ ಸಿಮ್ ಇಟ್ಟುಕೊಂಡು, ಮತ್ತೊಂದು ವೈ-ಫೈ ಮಾತ್ರ ಇರುವ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಮುಖ್ಯ ಆಪ್ ಬಳಸುವವರಿಗೆ ಇದು ತೊಂದರೆ ನೀಡಲಿದೆ.

  • ವಿದೇಶ ಪ್ರವಾಸ ಮಾಡುವವರು: ವಿದೇಶಕ್ಕೆ ಹೋದಾಗ ಭಾರತೀಯ ಸಿಮ್ ಕಾರ್ಡ್ ತೆಗೆದು ಸ್ಥಳೀಯ ಸಿಮ್ ಹಾಕಿದರೆ ಭಾರತದ ನಂಬರ್‌ನ ವಾಟ್ಸಾಪ್ ಕಾರ್ಯನಿರ್ವಹಿಸದೇ ಇರಬಹುದು.

  • ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳು: ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವವರಿಗೆ ಆರಂಭದಲ್ಲಿ ಪ್ರತಿ 6 ಗಂಟೆಗೊಮ್ಮೆ ಆಟೋಮ್ಯಾಟಿಕ್ ಲಾಗ್-ಔಟ್ ನಿಯಮ ಪ್ರಸ್ತಾಪಿಸಲಾಗಿತ್ತಾದರೂ, ಪ್ರಸ್ತುತ ಸರ್ಕಾರದ ತಿದ್ದುಪಡಿಯಂತೆ ಕೇವಲ ಸಂಶಯಾಸ್ಪದ ವಂಚನೆ ಪ್ರಕರಣಗಳಲ್ಲಿ ಮಾತ್ರ 'ರಿಸ್ಕ್ ಆಧಾರಿತ' ಲಾಗ್-ಔಟ್ ನಿಯಮ ಅನ್ವಯವಾಗಲಿದೆ.

No Active SIM, No WhatsApp: Centre Mandates SIM Binding to Curb Cyber Fraud
ನಿಮಗೆ ಗೊತ್ತಿಲ್ಲದೇ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಇರಬಹುದು? ನಕಲಿ ನಂಬರ್ ಬ್ಲಾಕ್ ಮಾಡೋದು ಹೇಗೆ ಗೊತ್ತಾ?

ಸರ್ಕಾರಕ್ಕೆ ಇದರ ಅಗತ್ಯ ಏನಿತ್ತು?

ಇತ್ತೀಚೆಗೆ ಸೈಬರ್ ವಂಚಕರು ಮುಗ್ಧ ಜನರಿಗೆ ವಾಟ್ಸಾಪ್ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದಾರೆ. ಈ ವಂಚಕರು ಒಟಿಪಿ ಪಡೆದು, ಸಿಮ್ ಕಾರ್ಡ್ ಇಲ್ಲದೆಯೇ ವಿದೇಶಗಳಲ್ಲಿ ಅಥವಾ ಬೇರೆಬೇರೆ ಸಾಧನಗಳಲ್ಲಿ ವಾಟ್ಸಾಪ್ ಬಳಸಿ ವಂಚನೆ ಎಸಗುತ್ತಿದ್ದರು. ಹೊಸ ನಿಯಮದಿಂದಾಗಿ ಸಿಮ್ ಕಾರ್ಡ್ ಇಲ್ಲದೆ ಖಾತೆ ತೆರೆಯಲು ಸಾಧ್ಯವಾಗದ ಕಾರಣ ಈ ವಂಚನೆಗಳಿಗೆ ಬ್ರೇಕ್ ಬೀಳಲಿದೆ.

ಒಟ್ಟಾರೆಯಾಗಿ, ಸೈಬರ್ ಅಪರಾಧಿಗಳು ಭಾರತೀಯ ಮೊಬೈಲ್ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಂಡು ವಿದೇಶಗಳಿಂದ ಡಿಜಿಟಲ್ ಅರೆಸ್ಟ್ ಹಾಗೂ ಫಿಶಿಂಗ್ ದಂಧೆ ನಡೆಸುವುದನ್ನು ತಡೆಯಲು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com