ಒಪ್ಪೋ A 12 ಬಜೆಟ್ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಒಪ್ಪೋ A 12 ಬಜೆಟ್ ಸ್ಮಾರ್ಟ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಒಪ್ಪೋ A 12 ಬಜೆಟ್ ಸ್ಮಾರ್ಟ್ ಫೋನ್ ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
3 /32 ಜಿಬಿ ಹಾಗೂ 4 /64 ಜಿಬಿ ಆವೃತ್ತಿಗಳಲ್ಲಿ ಲಭ್ಯವಿದ್ದು ಅನುಕ್ರಮವಾಗಿ 9,990 ಹಾಗೂ 11,490 ರೂಪಾಯಿಗಳಲ್ಲಿ ಲಭ್ಯವಿದೆ. ಇ-ಕಾಮರ್ಸ್ ಹಾಗೂ ಆಫ್ ಲೈನ್ ಸ್ಟಾರ್ ಗಳಲ್ಲಿ ಮೊಬೈಲ್ ಫೋನ್ ಗಳು ಲಭ್ಯವಿರಲಿದೆ.
ಇತ್ತೀಚಿನ ಸ್ಮಾರ್ಟ್ ಫೋನ್ ಗಳನ್ನು ಜೂನ್ 21 ರೊಳಗೆ ಖರೀದಿಸಿದರೆ ವಾರೆಂಟಿ ಅವಧಿಯನ್ನು 6 ತಿಂಗಳ ವರೆಗೆ ವಿಸ್ತರಿಸಲಾಗುತ್ತದೆ. ಹೊಸದಾಗಿ ಬಿಡುಗಡೆಯಾಗಿರುವ ಒಪ್ಪೋ ಫೋನ್ 6 .22 ಇಂಚ್ ವಾಟರ್ ಡ್ರಾಪ್ ಸ್ಕ್ರೀನ್ 1520x720 ಪಿಕ್ಸಲ್ ರೆಸ್ಯುಲ್ಯೂಷನ್ ಹೊಂದಿದ್ದು ಹಿಂಬದಿಯಲ್ಲಿ 3 ಡಿ ಡೈಮಂಡ್ ಬ್ಲೇಜ್ ಡಿಸೈನ್ ಹೊಂದಿದೆ.
ಮೀಡಿಯಾ ಟೆಕ್ ಹೀಲಿಯೋ p35 3 ಜಿಬಿ/ 4 ಜಿಬಿಯ ಜೊತೆಗೆ ಅಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. 13 ಮೆಗಾಪಿಕ್ಸಲ್ ಕ್ಯಾಮರಾ 2 ಎಂಪಿ ಸೆಕೆಂಡರಿ ಕ್ಯಾಮರಾವನ್ನು ಈ ಫೋನ್ ಹೊಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.