ಒನ್ ಪ್ಲಸ್ 8 ಪ್ರೋ 5 ಜಿ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯ!
ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ ಸಂಸ್ಥೆಯ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಫೋನ್ ಬರೊಬ್ಬರಿ ಒಂದು ತಿಂಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಜೂ.15 ರ ಬಳಿಕ ಲಭ್ಯವಿರಲಿದೆ.
ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ ಸಂಸ್ಥೆಯ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಫೋನ್ ಬರೊಬ್ಬರಿ ಒಂದು ತಿಂಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಜೂ.15 ರ ಬಳಿಕ ಲಭ್ಯವಿರಲಿದೆ.
ಕೋವಿಡ್-19 ಕಾರಣದಿಂದಗಿ ಉತ್ಪಾದನೆಗೆ ಹೊಡೆತ ಬಿದ್ದಿದ್ದರ ಪರಿಣಾಮ ಭಾರತದ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಲಭ್ಯತೆ ಒಂದು ತಿಂಗಳ ಕಾಲ ವಿಳಂಬವಾಗಿತ್ತು.
8 ಜಿಬಿ ರ್ಯಾಮ್ ಜೊತೆಗೆ 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಒನ್ ಪ್ಲಸ್ 8 ಪ್ರೋ ಮೊಬೈಲ್ ನ ದರವನ್ನು 54,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದ್ದರೆ, 12 ಜಿಬಿ ರ್ಯಾಮ್, 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಮೊಬೈಲ್ ದರವನ್ನು 59,999 ರೂ.ಗಳಿಗೆ ನಿಗದಿಪಡಿಸಲಾಗಿದೆ.
6.78 ಇಂಚ್ ಕ್ಯೂ ಹೆಚ್ ಡಿ ಫ್ಲ್ಯೂಯಿಡ್ ಡಿಸ್ಪ್ಲೇ 120 ಹೆಚ್ ಜೆಡ್ ರಿಫ್ರೆಷ್ ರೇಟ್ ನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಗೆ ಸ್ಞಾಪ್ ಡ್ರಾಗನ್ 865 ಚಿಪ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ X 555 ಜಿ ಮಾಡ್ರನ್ ಆರ್ ಎಫ್ ಸಿಸ್ಟಮ್ ನ್ನು ಹೊಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.