ಆರೋಗ್ಯ-ಜೀವನಶೈಲಿ

go ಮೂತ್ರ

ಪುರುಷರಿಗೆ ಅಸಹನೀಯ ಕಿರಿಕಿರಿ ಉಂಟುಮಾಡುವ ಯುರೇಥ್ರಲ್ ಸ್ಟ್ರಿಕ್ಚರ್ ಎಂಬ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಲಭ್ಯ

ಮೂತ್ರ ಬಂದಂತಾಗುತ್ತದೆ. ಆದರೆ ಶೌಚಾಲಯಕ್ಕೆ ಹೋಗಲು ಭಯ. ಯಾವಾಗ ಮೂತ್ರ ವಿಸರ್ಜನೆಗೆ ಹೋದರೂ ಮೂತ್ರ ಹನಿಹನಿಯಾಗಿ ಬಂದು, ಅಸಹನೀಯ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಪ್ರತಿಸಲವೂ ಹೆದರಿಕೆಯಿಂದಲೇ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ.
ನಿಶ್ಚಿತವಾಗಿಯೂ ಅದು ಯುರೇಥ್ರಲ್ ಸ್ಟ್ರಿಕ್ಚರ್. ಪುರುಷರಿಗೆ ಇದು ಸಿಕ್ಕಾಪಟ್ಟೆ ತೊಂದರೆ ಕೊಡುತ್ತದೆ. ಈಗ ಲಭ್ಯವಿರುವ ನವೀನ ಪುನಾರಚನಾ ತಂತ್ರಗಳು ಈ ತೊಂದರೆಗೆ ಉಪಶಮನ ನೀಡುವಲ್ಲಿ ಸಫಲವಾಗಿವೆ.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಮ್ಯೂಕೋಸಲ್ ಗ್ರ್ಯಾಫ್ಟ್ ಯುರೆಥ್ರೊಪ್ಲಾಸ್ಟಿ ಎಂಬ ಆಧುನಿಕ ಪುನಾರಚನಾ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಿದ ವೈದ್ಯರು ಯುರೇಥ್ರಲ್ ಸ್ಟ್ರಿಕ್ಚರ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಸಮಸ್ಯೆ?
ಮೂತ್ರಕೋಶದಿಂದ ಮೂತ್ರ ಸರಾಗವಾಗಿ ಹರಿಯುವಂತೆ ಮೂತ್ರನಾಳ ಮಾಡುತ್ತದೆ. ಪುರುಷರಲ್ಲಿ ಮೂತ್ರನಾಳ ತೆಳುವಾದ ಟ್ಯೂಬ್ನಂಥ ರಚನೆ ಹೊಂದಿದ್ದು ಮೂತ್ರಕೋಶದ ಕೆಳಭಾಗದಿಂದ ಪ್ರಾರಂಭಗೊಂಡು ಶಿಶ್ನದ ಉದ್ದಕ್ಕೂ ಹಾಯ್ದುಹೋಗಿರುತ್ತದೆ.  ಯುರೇಥ್ರಲ್ ಸ್ಟ್ರಿಕ್ಟರ್ನಿಂದ ಮೂತ್ರನಾಳ ಸಂಕುಚಿತಗೊಳ್ಳತೊಡಗುತ್ತದೆ. ಇದರಿಂದ ಅಂಗಾಂಶಗಳಲ್ಲಿ ಗೀರುಗಳು ಸಂಭವಿಸಿ ಉರಿಯೂತ ಉಂಟಾಗುತ್ತದೆ. ಗಂಭೀರವಾದ ಸ್ಟ್ರಿಕ್ಚರ್ನಿಂದ ಮೂತ್ರ ವಿಸರ್ಜನೆ ಮಾಡಲಾಗದ ಸ್ಥಿತಿಯಲ್ಲಿರುವ ರೋಗಿಗಳು ಮೂತ್ರನಾಳ ಅಥವಾ ಕಿಡ್ನಿಯಲ್ಲಿ ಗಾಯಗಳಾಗುವ ಅಥವಾ ಸೋಂಕು ತಗುಲುವ ಅಪಾಯವನ್ನು ತಪ್ಪಿಸಲು ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು.
ಚಿಕಿತ್ಸೆ ಏನು?
ಮ್ಯೂಕೋಸಲ್ ಗ್ರ್ಯಾಫ್ಟ್ ಯುರೆಥ್ರೊಪ್ಲಾಸ್ಟಿ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರನಾಳದ ಸಂಕುಚಿತಗೊಂಡ ಭಾಗವನ್ನು ತಾತ್ಕಾಲಿಕವಾಗಿ ಹಿಗ್ಗುವಂತೆ ಮಾಡಲಾಗುತ್ತದೆ. ಇದರಿಂದ ಆ ಕ್ಷಣಕ್ಕೆ ಮೂತ್ರ ವಿಸರ್ಜಿಸುವಾಗ ಉಪಶಮನದ ಸಮಾಧಾನ ನೀಡುತ್ತದೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರನಾಳ ಸಂಕುಚಿತಗೊಂಡ ಭಾಗದಲ್ಲಿ ಚಿಕ್ಕದಾಗಿ ಕೊರೆಯಲಾಗುತ್ತದೆ. ಇದರಿಂದ ಮೂತ್ರನಾಳ ಬೇರ್ಪಟ್ಟು ಸಂಕುಚಿತ ಭಾಗ ತೆರೆದುಕೊಳ್ಳುತ್ತದೆ. ಗಾಯಗೊಂಡ ಅಂಗಾಂಶವನ್ನು ಬದಲಾಯಿಸಲು ಬಾಯಿಯ ಒಳಭಾಗದಿಂದ ತೆಗೆದುಕೊಳ್ಳಲಾಗುವ ಅಂಗಾಂಶವನ್ನು ಹೊರಮೈಯಲ್ಲಿ ಕೂಡಿಸಲಾಗುತ್ತದೆ. ಪುನಃ ಮೂತ್ರನಾಳವನ್ನು ಮೊದಲಿನ ವಿನ್ಯಾಸಕ್ಕೆ ತರಲಾಗುತ್ತದೆ. ಈ ಎಲ್ಲ ಸಂದರ್ಭಗಳಲ್ಲಿಯೂ ಜೀವಕೋಶಗಳು ಸಾಯದೇ ಇರುವಂತಢೆ (ನೆಕ್ರೋಸಿಸ್ ಅನ್ನು ತಪ್ಪಿಸಲು) ಮಾಡಲು ರಕ್ತಸಂಚಾರ ನಿರಂತರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.
ಅಮೆರಿಕದಲ್ಲಿ ಕೈಗೊಳ್ಳಲಾಗಿರುವ ಅಧ್ಯಯನದ ಪ್ರಕಾರ ಈ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಶೇ.87 ರಿಂದ ಶೇ.98ರಷ್ಟಿರುತ್ತದೆ. 2 ಸೆಂ.ಮೀಗಿಂತಲೂ ಉದ್ದವಾಗಿರುವ ಸ್ಟ್ರಿಕ್ಚರ್ಗಳನ್ನು ರಿಪೇರಿ ಮಾಡಲು ಮ್ಯೂಕೋಸಲ್ ಗ್ರ್ಯಾಫ್ಟ್ ಯುರೆಥ್ರೊಪ್ಲಾಸ್ಟಿ ಚಿಕಿತ್ಸೆ ಅತ್ಯುತ್ತಮ ವಿಧಾನವೆಂದು ಪರಿಗಣಿತವಾಗಿದೆ.
(ಲೇಖಕರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಯುರೋಲಜಿ ಹಾಗೂ ಟ್ರಾನ್ಸಾಪ್ಲಾಂಟ್ ಶಸ್ತ್ರಚಿಕಿತ್ಸಾ ತಜ್ಞ)

ಹನಿಸುತಿದೆ ಯಾಕೆ ಇಂದು!?
1989ರಲ್ಲಿ ಕಾಣಿಸಿಕೊಂಡ ಹನಿಹನಿಯಾಗಿ ಮೂತ್ರ ಹೋಗುತ್ತಿದ್ದುದರಿಂದ ತುಂಬಾ ಕಿರಿಕಿರಿಯಾಗುತ್ತಿತ್ತು. ಪಾಟ್ನಾ, ಬಿಹಾರ್ ಮುಂತಾದೆಡೆಗಳಲ್ಲಿ ವೈದ್ಯರನ್ನು ಭೇಟಿಮಾಡಿ ವಿಐಯು (ವಿಶ್ಯುವಲ್ ಇಂಟರ್ನಲ್ ಯುರಿಥ್ರೋಮಿ) ಚಿಕಿತ್ಸೆ ಪಡೆದುಕೊಂಡೆ. ಬೆಂಗಳೂರಿನಲ್ಲಿ ಮ್ಯೂಕೋಸಲ್ ಗ್ರ್ಯಾಫ್ಟ್ ಯುರೆಥ್ರೊಪ್ಲಾಸ್ಟ್ಟಿ ಚಿಕಿತ್ಸೆ ಹಡೆದ ನಂತರ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿದೆ.
- ಅವನಿ ಕುಮಾರ್, ಚಿಕಿತ್ಸೆಗೆ ಒಳಗಾದವರು

ಲಕ್ಷಣಗಳು ಹೀಗಿರುತ್ತವೆ...
= ಕಷ್ಟಕರ ಹಾಗೂ ನೋವಿನಿಂದ ಕೂಡಿದ ಮೂತ್ರ ವಿಸರ್ಜನೆ
= ಕಿಬ್ಬೊಟ್ಟೆ ನೋವು
= ವೀರ್ಯ ಅಥವಾ ಮೂತ್ರದಲ್ಲಿ ರಕ್ತ ಹೋಗುವುದು

ಸ್ಟ್ರಿಕ್ಟರ್ಗೆ ಕಾರಣಗಳೇನು?
ಬೀಳುವುದು, ರಸ್ತೆ ಅಪಘಾತಗಳು, ಪೆಲ್ವಿಕ್ ಇಂಜುರಿ, ಈ ಹಿಂದೆ ಮೂತ್ರನಾಳಗಳಲ್ಲಿ ಉಂಟಾದ ಗಾಯಗಳು, ಯುರೆಥ್ರಿಟಿಸ್, ಲೈಂಗಿಕ ರೋಗಗಳು, ಸೋಂಕುಗಳಿಗೆ ಈಡಾಗುವಂತೆ ಮಾಡುವ ಅಪೌಷ್ಟಿಕತೆ. ಮೂತ್ರಕೋಶ ಅಥವಾ ಮೂತ್ರನಾಳಗಳಿಗೆ ಉಂಟಾಗುವ ಗಾಯಗಳಿಂದ ಉದ್ಭವಿಸುವ ಮಾನಸಿಕ ಆಘಾತವೂ ಮೂತ್ರನಾಳದಲ್ಲಿ ಗೀರುಗಳು ಸಂಭವಿಸುವಂತೆ ಮಾಡುತ್ತದೆ. ಆಗ ಮೂತ್ರನಾಳ ಸಂಕುಚಿತಗೊಳ್ಳುವುದಕ್ಕೆ ಕಾರಣವಾಗುತ್ತದೆ.

-ಡಾ.ಮೋಹನ್ ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!