ಭಾರತ ಜಗತ್ತಿನ ಹೃದಯ ರೋಗಗಳ ರಾಜಧಾನಿಯಾಗುವತ್ತ ದಾಪುಗಾಲಿಡುತ್ತಿದೆ. ಆದರೆ, ಕೈಗೆಟುಕದ ಹೃದಯ ಚಿಕಿತ್ಸೆಯಿಂದ ಹಾಗೂ ಜಾಗೃತಿ ಕೊರತೆ ಸೇರಿ ಶೇ.40ರಷ್ಟು ಮಂದಿ ಹೃದ್ರೋಗದಿಂದಲೇ ಮೃತರಾಗುತ್ತಿದ್ದಾರೆ. ಈ ಸೂಕ್ಷ್ಮ ಸಮಸ್ಯೆಯನ್ನು ಮನಗೊಂಡ ಬಹುರಾಷ್ಟ್ರೀಯ ಔಷಧಿ ಕಂಪನಿ ಇಂಡಿಯಾ ಮೆಡ್ಟ್ರಾನಿಕ್ ಬೆಂಗಳೂರಿನ ಬನಶಂಕರಿಯ ಸಾಗರ್ ಹಾಸ್ಪಿಟಲ್ಸ್ ಸಹಯೋಗದಲ್ಲಿ ಹೆಲ್ದಿ ಹಾರ್ಟ್ಸ್ ಫಾರ್ ಆಲ್ (ಎಚ್ಎಚ್ಎಫ್ಎ) ಎಂಬ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹೃದ್ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಕೈಗೆಟುಕುವ ಚಿಕಿತ್ಸೆ ದೊರೆಯುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಹೃದಯದಲ್ಲಿ ಅಳವಡಿಸುವ ಸ್ಟೆಂಟ್, ಪೇಸ್ ಮೇಕರ್, ಇಂಪ್ಲಾಂಟೇಬಲ್ ಕಾರ್ಡಿಯೋವರ್ಟರ್-ಡಿಫ್ರೈಬ್ರಿಲ್ಲೇಟರ್ (ಐಸಿಡಿ) ಮತ್ತು ಕಾರ್ಡಿಯಾಕ್ ರಿಸಿಂಕ್ರೊನೈಸೇಷನ್ ಥೆರಪಿ ಸೇರಿದಂತೆ ಮುಂತಾದ ಹೃದಯ ಚಿಕಿತ್ಸೆಗಳಿಗೆ ಈ ಕಾರ್ಯಕ್ರಮದ ಮೂಲಕ ಹಣಕಾಸು ನೆರವು ನೀಡಲಾಗುತ್ತದೆ. ಅಲ್ಲದೇ ಹೃದಯದ ತುರ್ತು ಚಿಕಿತ್ಸೆಗೆ ಸ್ಥಳದಲ್ಲೇ ಎಚ್ಎಚ್ಎಫ್ಎ ಸಾಲ ನೀಡುತ್ತಿದ್ದು, ಇದುವರೆಗೆ 150ಕ್ಕೂ ಹೆಚ್ಚು ಮಂದಿ ಇದರ ಲಾಭ ಪಡೆದಿದ್ದಾರೆ. ಎಚ್ಎಚ್ಎಫ್ಎ ಸೌಲಭ್ಯಕ್ಕಾಗಿ ಸಂಪರ್ಕಿಸಿ: 18002095123.
ಎಚ್ಎಚ್ಎಫ್ಎನಿಂದ ಸಾಲದ ಲಾಭವೇನು?
= ಶೇ.0 ಬಡ್ಡಿ ಸಾಲ, ಮರುಪಾವತಿಸಲು 6 ತಿಂಗಳ ಅವಕಾಶ.
= ದೀರ್ಘಕಾಲದ ಇಎಮ್ಐ ಕಂತುಗಳ ಸೌಲಭ್ಯವೂ ಲಭ್ಯ.
= ಕನಿಷ್ಠ ದಾಖಲೆಗಳು.
= 3-24 ಗಂಟೆಗಳೊಳಗೆ ಸಾಲ.
= ಅಡಮಾನದ ಅಗತ್ಯವಿಲ್ಲ.
= ಪೂರ್ವಪಾವತಿ ಶುಲ್ಕವಿಲ್ಲ.
ಜನರು ಹೃದ್ರೋಗಗಳಿಗೆ ಒಳಗಾದಾಗ ಅರ್ಥಿಕ ಸಮಸ್ಯೆ ಹಾಗೂ ಜಾಗೃತಿ ಕೊರತೆಯಿಂದ ಬಹಳಷ್ಟು ಸಮಸ್ಯೆ ಅನುಭವಿಸುವಂತಾಗುತ್ತದೆ. ಶೇ.60-70ರಷ್ಟು ರೋಗಿಗಳು ಕೃಷಿಯನ್ನೇ ಆಧರಿಸಿದ್ದು, ನಿಗದಿತ ಮಾಸಿಕ ಆದಾಯ ಹೊಂದಿರುವುದಿಲ್ಲ. ಇಂಥವರಿಗೆ ಆಕರ್ಷಕ ಬಡ್ಡಿ ದರದಲ್ಲಿ ಇಎಂಐ ಕಂತಿನ ಸೌಲಭ್ಯವನ್ನು ಎಚ್ಎಚ್ಎಫ್ಎ ನೀಡುತ್ತದೆ.
-ಕೆ.ಎಸ್. ಕಿಶೋರ್, ಹೃದಯರೋಗ ತಜ್ಞ, ಸಾಗರ್ ಹಾಸ್ಪಿಟಲ್ಸ್