ಆರೋಗ್ಯ-ಜೀವನಶೈಲಿ

ವೀರ್ಯ ಪರಂಪರೆ

ಇಂದಿನ ಬಹುತೇಕ ಬಂಜೆ ಪ್ರಕರಣಗಳ ಮುಖ್ಯ ಕಾರಣಗಳಲ್ಲಿ ವಿರ್ಯಾಣುಗಳ ಕೊರತೆ ಒಂದೆಂಬುದು ತಜ್ಞರು ಸಾಬೀತುಪಡಿಸಿದ ಸಂಗತಿ.

ಅವನೀಗ ಪುರುಷ. ಪುರುಷತ್ವ ಕರಗಿದ ಪುರುಷ. ಇಂದಿನ ಬಹುತೇಕ ಬಂಜೆ ಪ್ರಕರಣಗಳ ಮುಖ್ಯ ಕಾರಣಗಳಲ್ಲಿ ವಿರ್ಯಾಣುಗಳ ಕೊರತೆ ಒಂದೆಂಬುದು ತಜ್ಞರು ಸಾಬೀತುಪಡಿಸಿದ ಸಂಗತಿ...

ಅವಳು ಫಸಲು ಹುಟ್ಟದ ಮಡಿಲು. ಒಂದಿಷ್ಟು ಕನಸುಗಳಿಗೆ ಜನನ ಕೊಡಬಲ್ಲಳು ಬಿಟ್ಟರೆ, ಕಂದಮ್ಮಗಳಿಗಲ್ಲ. ತಲೆ ಎತ್ತಿ ನಡೆಯುವುದನ್ನೇ ಮರೆತುಬಿಟ್ಟಿದ್ದಾಳೆ. ಹೆರುವುದಕ್ಕೆ ಅಸಮರ್ಥಳೆಂಬ ಎಲ್ಲರ ಕೂಗು ಅವಳ ಕಿವಿಯನ್ನು ತಲುಪುತ್ತಿವೆ. 'ಬಂಜೆ' ಎಂಬುದೇನು ಅವಳಿಗೆ ಪಟ್ಟವಲ್ಲ. ಆಕಸ್ಮಿಕವಾಗಿ ಬಿದ್ದ ಪೆಟ್ಟು. ಕೆಲವು ಕಾರ್ಯಕ್ರಮಗಳಲ್ಲಿ ಅವಳಿಗೆ ಪ್ರವೇಶ ನಿಷಿದ್ಧ. ಡೈವೋರ್ಸ್ ಪೇಪರ್ಗೆ ಗಂಡನ ಸಹಿಯೊಂದು ಬಿದ್ದರೆ ಸಾಕಷ್ಟೇ...
ಬಿಡಿ, ಅದು ಹೆಣ್ಣಿನ ಸ್ಥಿತಿ. ಇನ್ನು ಗಂಡಿನ ಗೋಳು ಗೊತ್ತಾ? ಅವನೀಗ ಪುರುಷ. ಪುರುಷತ್ವ ಕರಗಿದ ಪುರುಷ. ಇಂದಿನ ಬಹುತೇಕ ಬಂಜೆ ಪ್ರಕರಣಗಳ ಮುಖ್ಯ ಕಾರಣಗಳಲ್ಲಿ ವಿರ್ಯಾಣುಗಳ ಕೊರತೆ ಒಂದೆಂಬುದು ತಜ್ಞರು ಸಾಬೀತುಪಡಿಸಿದ ಸಂಗತಿ.
ತಡವಾಗಿ ಸಪ್ತಪದಿ ತುಳಿಯುವುದು, ಆಹಾರ ಶೈಲಿ, ನೀರು, ಕೆಲಸ ಮಾಡೋ ಬಗೆ... ಹೀಗೆ ನಾನಾ ಕಾರಣಗಳಿಂದ ಗಂಡಿನಲ್ಲಿ ವೀರ್ಯಾಣುಗಳ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ದಶಕದ ಹಿಂದೆ ಪ್ರತಿಯೊಂದು ಮಿಲಿಲೀಟರ್ನಲ್ಲಿ 40-50 ದಶಲಕ್ಷ ವೀರ್ಯಾಣು ಇದ್ರೆ ನಾರ್ಮಲ್ ಎಂದು ಪರಿಗಣಿಸುತ್ತಿದ್ದರು. ಈಗ ವಿಶ್ವ ಆರೋಗ್ಯ ಸಂಸ್ಥೆ ಕೇವಲ 20 ದಶಲಕ್ಷ ವೀರ್ಯ ಇದ್ದರೆ ನಾರ್ಮಲ್ ಎಂದು ಹೇಳುವಷ್ಟರ ಮಟ್ಟಿಗೆ ಬಂದಿದೆ. ಅಂದರೆ, ಪುರುಷರಲ್ಲಿ ವೀರ್ಯಾಣುಗಳು ಇದ್ದರೆ ಸಾಕು ಎಂಬಂಥ ದುಃಸ್ಥಿತಿ. ಭಾರತದಲ್ಲಿ 12-18 ದಶಲಕ್ಷ ದಂಪತಿ ಮಕ್ಕಳಾಗದ ಸಮಸ್ಯೆಗಳಿಂದ ಬಳಲುತ್ತಿದ್ದು, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಮಸ್ಯೆ ಕಾಡುತ್ತಿರುವುದು ಗಂಡಿನಲ್ಲಿರುವ ದೌರ್ಬಲ್ಯಗಳಿಂದ.
ಗಂಡು ಹೆಣ್ಣು ಕೂಡಿದಾಗ ಬಿಡುಗಡೆಯಾಗುವ ವೀರ್ಯಾಣುಗಳು ಹೆಣ್ಣಿನ ಗರ್ಭನಾಳದೊಳಗೆ ನುಗ್ಗಿ ಅಂಡಾಣುವಿನೊಂದಿಗೆ ಕೂಡಬೇಕು. ಆಗ ಗರ್ಭ ಕಟ್ಟುತ್ತದೆ. ಆದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆಯಿದ್ದಲ್ಲಿ ಅದು ವೇಗವಾಗಿ ಆಗಿ ಚಲಿಸದೆ ಅಂಡಾಣುವಿನೊಂದಿಗೆ ಸೇರೋದೇ ಇಲ್ಲ. ಒಂದು ವರ್ಷದವರೆಗೂ ಯಾವುದೇ ಸಂತಾನ ನಿಯಂತ್ರಣ ಕ್ರಮಗಳನ್ನೂ ಅನುಸರಿಸದೆಯೂ, ವರ್ಷದವರೆಗೂ ಸಮರ್ಥ ಲೈಂಗಿಕ ಕ್ರಿಯೆ ನಡೆದರೂ ಕನ್ಸೀವ್ ಆಗ್ಲಿಲ್ಲ ಎಂದರೆ ಏನೋ ಪ್ರಾಬ್ಲಂ ಇದೆ ಅಂತಲೇ ಅರ್ಥ.

ಕಾಡುವ ಸಮಸ್ಯೆಗಳೇನು?
ವೀರ್ಯಾಣವಿನ ನಿಧಾನಗತಿಯ ಚಲನೆ ಅತವಾ ಕಮ್ಮಿಯಾಗಿರೋದು, ಬಾಲ್ಯದಲ್ಲಿಯೇ ಹರ್ನಿಯಾದಂಥ ಚಿಕಿತ್ಸೆಗೆ ಒಳಗಾಗಿದ್ದರೆ ಟೆಸ್ಟಿಸ್ಗೆ ಏಟು ಬಿದ್ದು ವಯಸ್ಕನಾಗುತ್ತಿದ್ದಂತೆ ವೀರ್ಯಾಣುಗಳ ಚಲನೆಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ. ಹಾರ್ಮೋನ್ ರೋಗಗಳು, ಹೊಟ್ಟೆ ಹುಣ್ಣು ಅಥವಾ ಇತರೆ ಸಮಸ್ಯೆಗಳಿಗೆ ದೀರ್ಘಕಾಲದವರೆಗೂ ತೆಗೆದುಕೊಳ್ಳುವ ಅಸ್ಪರಿನ್ ಹಾಗೂ ಸ್ಟೆರಾಯ್ಡ್ ಅಂಶಗಳಿರುವ ಔಷಧಿಗಳು ತೆಗೆದುಕೊಂಡರೂ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಮಧುಮೇಹದಂಥ ಸಮಸ್ಯೆಗಳಿದ್ದಲ್ಲಿ ವೀರ್ಯಾಣುಗಳು ಒಣಗಿದಂತಾಗಿ ಚಲನೆ ನಿಧಾನವಾಗಬಲ್ಲದು. ಸಿಗರೇಟ್ ಸೇವನೆ ಅಥವಾ ಹೊಗೆಸೊಪ್ಪಿನ ಅಂಶವುಳ್ಳ ಯಾವುದಾದರೂ ವಸ್ತುಗಳ ಸೇವನೆ, ಕುಡಿತವೂ ವೀರ್ಯಾಣುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.

ಪಕ್ವ ವೀರ್ಯಾಣು ಹೇಗಿರುತ್ತೆ?
ಒಂದು ಪಕ್ವತೆ ಹೊಂದಿರುವ ವೀರ್ಯಾಣು ಟೋಪಿ ಹಾಕಿಕೊಂಡ ತಲೆ, ಕತ್ತು ಹಾಗೂ ಬಾಲವನ್ನು ಹೊಂದಿರುತ್ತದೆ. ಸುಮಾರು 55 ಮೈಕ್ರಾನ್ಸ್ ಉದ್ದವಿರುವ ವೀರ್ಯಾಣುವಿನ ತಲೆ 3- 6 ಮೈಕ್ರಾನ್, ಕುತ್ತಿಗೆ 8 ಹಾಗೂ ಬಾಲ 45 ಮೈಕ್ರಾನ್ನಷ್ಟು ಉದ್ದವಿರುತ್ತದೆ. ಒಂದು ಮೈಕ್ರಾನ್ ಎಂದರೆ ಮೀಟರ್ವೊಂದರ ದಶಲಕ್ಷಾಂಶದಷ್ಟು ಉದ್ದ.

ವೀರ ವೀರ್ಯಾಣುಗಳು ಮುಖ್ಯ
ಸಮಸ್ಯೆಗಳು ಏನಾದ್ರೂ ಆಗಲಿ. ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಹಾಗೆ ಸ್ಪರ್ಮ್ (ವೀರ್ಯಾಣು) ಕೌಂಟ್ ಕಡಿಮೆ ಎಂದ ಕೂಡಲೇ ಪುರಷತ್ವದ ಬಗ್ಗೆಯೇ ಆತಂಕ ಪಡೋದು ಬೇಡ. ಅವಕ್ಕೂ ಪರಿಹಾರ ಇದ್ದೇ ಇರುತ್ತದೆ.

  •     ಮೊದಲು ಶ್ವಾಸಕೋಶದಲ್ಲಿರುವ ಹೊಗೆಯನ್ನು ಹೋಗಿಸಿಕೊಂಡು, ರಕ್ತದಲ್ಲಿರುವ ಬೇಡದ ಅಂಶಗಳನ್ನು ಹೋಗಲಾಡಿಸಿಕೊಳ್ಳಿ. ಮನಸ್ಸು ನಿರಾಳವಾಗಲಿ. ಉಸಿರಾಟ ಸುಗಮವಾಗಿರಲಿ. ಆಹಾರದಲ್ಲಿರುವ ವಿಷವಸ್ತುಗಳನ್ನು ತ್ಯಜಿಸಿ.
  •     ಮಧಮೇಹಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.
  •     ಸೂಕ್ತ ಪೌಷ್ಟಿಕಾಂಶಗಳನ್ನು ತೆಗೆದುಕೊಂಡರೆ ಸಹಜವಾಗಿ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತದೆ.
  •     ಸೋಂಕಿಗೆ ಸೂಕ್ತ ಔಷಧ ತೆಗೆದುಕೊಳ್ಳಿ.
  •     ವೀರ್ಯಾಣುಗಳು ಉತ್ಪತ್ತಿಯಾಗುವಂತೆ ಉತ್ತೇಜಿಸಲು ಟೆಸ್ಟಿಸ್ಗೆ ಮೈಕ್ರೋ ಸರ್ಜರಿ ಮಾಡಬಹುದು.
  •     ಸ್ಪರ್ಮ್ ಉತ್ಪತ್ತಿ ಹೆಚ್ಚಾಗದೇ ಹೋದಲ್ಲಿ, ಸ್ಖಲನಗೊಳ್ಳುವ ವೀರ್ಯಗಳನ್ನೇ ಆರೋಗ್ಯವಾಗಿರುವುದನ್ನು ಆರಿಸಿ ನೇರವಾಗಿ ಗರ್ಭಕೋಶದೊಳಗೆ ತೂರಿಸಬಹುದು.
  •     ಐವಿಎಫ್ ಮೂಲಕವೂ ಗರ್ಭ ಧರಿಸುವಂತೆ ಮಾಡಬಹುದು.
  •     ಅಕಸ್ಮಾತ್ ಸ್ಪರ್ಮ್ ಕೌಂಟ್ ಮಿಲಿಲೀಟರ್ವೊಂದಕ್ಕೆ 5 ದಶಲಕ್ಷ ಇದ್ದು, ಪಕ್ವ ವೀರ್ಯಗಳು ಸಿಗದೇ ಹೋದಲ್ಲಿ ಅಥವಾ ಚಲಶೀಲತೆಯೂ ಕಡಿಮೆ ಇದ್ದರೆ, ಅದರಲ್ಲೇ ಕೇವಲ ಒಂದೇ ಒಂದು ವೀರ್ಯವನ್ನು ತೆಗೆದು ಬೆಳೆಸಿ, ಪಕ್ವಗೊಂಡ ನಂತರ ಗರ್ಭದೊಳಗೆ ಕಳುಹಿಸಲಾಗುವುದು.
  •     ನಿಮಿರು ಸಮಸ್ಯೆ ಇರುವ ಪುರುಷರಿಂದಲೂ ಉತ್ಪತ್ತಿ ಗ್ರಂಥಿಯಿಂದಲೇ ನೇರವಾಗಿ ವೀರ್ಯವನ್ನು ಸಂಗ್ರಹಿಸಿ ಬೆಳೆಸಬಹುದು.  ಇವೆಲ್ಲವೂ ವಿಫಲವಾದರೂ ತಲೆ ಕೆಡಿಸಿಕೊಳ್ಳಬೇಡಿ. ವೀರ್ಯದಾನಿಗಳು ಸಾಕಷ್ಟಿದ್ದಾರೆ.


ನೀವು ತೆಗೆದುಕೊಳ್ಳುವ ಔಷಧಿಗಳು ವೀರ್ಯಾಣುಗಳ ಉತ್ಪತ್ತಿ ಹಾಗೂ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ. ವಿಶೇಷವಾಗಿ ಕೂದಲು ಹುಟ್ಟುತ್ತೆ, ತೆಳ್ಳಗಿದ್ದರೆ ದಪ್ಪಗೆ ಆಗ್ತಾರೆ ಅಥವಾ ಉಲ್ಟಾ ಪರಿಣಾಮ ಬೀರುವ ಔಷಧಿಗಳು ನೇರವಾಗಿಯೇ ಸ್ಪರ್ಮ್ ಕೌಂಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರ ಅಗತ್ಯ.

ವೀರ್ಯವಂತರಾಗೋದು ಹೇಗೆ?

  •     ಸಮಾಧಾನವಾಗಿರಿ. ಎಲ್ಲವಕ್ಕೂ ಪರಿಸರ ಪ್ರಶಾಂತವಾಗಿರಬೇಕು. ವಿಶೇಷವಾಗಿ ಚಳಿಗಾಲದಲ್ಲಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಬಿಸಿನೀರಲ್ಲಿ ಟಬ್ ಬಾತ್ ಅವಾಯ್ಡ್ ಮಾಡಿ. ಬೆಚ್ಚಗಿನ ನೀರಲ್ಲಿ ಶವರ್ ಬಾತ್ ಸ್ಪರ್ಮ್ ಕೌಂಟನ್ನು ಹೆಚ್ಚಿಸುತ್ತದೆ. ಟೈಟ್ ಪ್ಯಾಂಟ್, ಒಳ ಉಡುಪುಗಳನ್ನು ಧರಿಸೋದು ನಿಲ್ಲಿಸಿ. ಲ್ಯಾಪ್ ಮೇಲೆ ಇಟ್ಟಿಕೊಂಡು ಕೆಲಸ ಮಾಡುವುದಕ್ಕೆ ಲ್ಯಾಪ್ಟಾಪ್ ಇರೋದಾದ್ರೂ, ಅದು ಸದಾ ಅಲ್ಲಿಯೇ ಇರಬೇಕು ಎಂದೇನೂ ಇಲ್ಲ. ದೇಹ ಹೀಟ್ ಆಗದಂತೆ ಎಚ್ಚರವಹಿಸಿ. ಕಾರು ಡ್ರೈವ್ ಮಾಡುವಾಗಲೂ ಉತ್ತಮ ಸೀಟ್ನ ವ್ಯವಸ್ಥೆ ಮಾಡಿಕೊಳ್ಳಿ.
  •     ತೀರಾ ಏಜ್ ಆಗುವ ತನಕ ಕಾಯಬೇಡಿ. ಮಡದಿ, ಮಕ್ಕಳ ಬಗ್ಗೆ ಆದಷ್ಟು ಬೇಗನೆ ಯೋಚಿಸಿ.
  •     ಮನಸ್ಸಿಗೆ ಖುಷಿಯಾಗುತ್ತೆ ಎಂದು ಸಿಗರೇಟ್, ಕುಡಿತ ಅಂತ ಹಿಂದೆ ಬೀಳಬೇಡಿ. ಇವುಗಳಿಗೆಲ್ಲ ಗುಡ್ಬೈ ಹೇಳಿ ಬಿಡಿ.
  •     ಸೂಕ್ತ ಸಮಯದಲ್ಲಿ ಯೋಗ, ವ್ಯಾಯಾಮ, ತಿಂಡಿ, ತೀರ್ಥ, ಹೊತ್ತೊತ್ತಿಗೆ ನಿದ್ರೆ, ರಜೆ ಎಂದು ಒಳ್ಳೆಯ ಪರಿಸರವಿರುವ ಸ್ಥಳಗಳಿಗೆ ಭೇಟಿ ನೀಡೋದು ಮುಂತಾದ ಕ್ರಿಯಾತ್ಮಕ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
  •     ಬಿಸಿಲಿಗೆ ತುಸು ಮೈವೊಡ್ಡಿ. ಇದರಿಂದ ವಿಟಮಿನ್ 'ಡಿ' ದೊರೆತು ಸ್ಪರ್ಮ್ ಕೌಂಟ್ ಹೆಚ್ಚಾಗುತ್ತದೆ. ಸೂರ್ಯನ ಕಿರಣಗಳು ಸೆಕ್ಸ್ಗೆ ಸಂಬಂಧಪಟ್ಟ ಹಾರ್ಮೋನ್ಗಳನ್ನು ಹೆಚ್ಚಿಸುತ್ತದೆ.
  • ಸದಾ ಮೂರ್ಖರ ಪೆಟ್ಟಿಗೆ ಮುಂದೆ ಕೂರಬೇಡಿ. ನಿಮ್ಗೆ ಗೊತ್ತಾ? ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಸಂಶೋಧನೆಗಳು ವ್ಯಕ್ತಿಯೊಬ್ಬ ವಾರಕ್ಕೆ 20 ಗಂಟೆಗಳು ಟಿವಿ ನೋಡಿದರೆ ಆತನ ಸ್ಪರ್ಮ್ ಕೌಂಟ್ ಟಿವಿ ಮುಂದೆ ಬಹಳ ಕಡಿಮೆ ಟೈಮ್ ಕಳೆಯುವ ವ್ಯಕ್ತಿಗಿಂತ ಅರ್ಧದಷ್ಟು ಕಡಿಮೆ ಇರುತ್ತದೆ ಎಂಬುದನ್ನು ಸಾಬೀತುಪಡಿಸಿದೆ.
  • ಲೈಂಗಿಕವಾಗಿ ಕ್ರಿಯಾಶೀಲವಾಗಿರುವುದರಿಂದ ವೀರ್ಯಗಳ ಚಲನಶೀಲತೆ ಹೆಚ್ಚುತ್ತದೆ. ವಾರಕ್ಕೊಮ್ಮೆ ಸೆಕ್ಸ್ನಲ್ಲಿ ಭಾಗಿಯಾದರೆ ಶೇ.15ರಷ್ಟು ಗರ್ಭ ಧರಿಸೋದು ಕಡಿಮೆಯಾಗುತ್ತದೆ. ಮೂರು ನಾಲ್ಕು ದಿನಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ದಂಪತಿಗಿಂತ ಶೇ.50ರಷ್ಟು ಗರ್ಭ ಧರಿಸೋದು ಕಡಿಮೆಯಾಗುತ್ತದೆ. ಹಾಗಂತ ಲೈಂಗಿಕವಾಗಿ ತೀರಾ ಆ್ಯಕ್ಟಿವ್ ಆಗಿರೋದು ಕೂಡ ಅಷ್ಟೇನು ಒಳ್ಳೆಯದಲ್ಲ ಎಂಬುದು ನೆನಪಿರಲಿ.
  • ಕಡಿಮೆ ವ್ಯಾಯಾಮ ಮಾಡುವವರಿಗಿಂತಲೂ ಸರಿಯಾಗಿ ವ್ಯಾಯಾಮ ಮಾಡುವವರಲ್ಲಿ ಸ್ಪರ್ಮ್ ಕೌಂಟ್ ಹೆಚ್ಚಿರುತ್ತದೆ ಎಂದು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಹೇಳಿದೆ.
  • ನೀವು ತೆಗೆದುಕೊಳ್ಳುವ ಔಷಧಿಗಳು ವೀರ್ಯಾಣುಗಳ ಉತ್ಪತ್ತಿ ಹಾಗೂ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರದಂತೆ ಎಚ್ಚರವಹಿಸಿ. ವಿಶೇಷವಾಗಿ ಕೂದಲು ಹುಟ್ಟುತ್ತೆ, ತೆಳ್ಳಗಿದ್ದರೆ ದಪ್ಪಗೆ ಆಗ್ತಾರೆ ಅಥವಾ ಉಲ್ಟಾ ಪರಿಣಾಮ ಬೀರುವ ಔಷಧಿಗಳು ನೇರವಾಗಿಯೇ ಸ್ಪರ್ಮ್ ಕೌಂಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರ ಅಗತ್ಯ.
  •     ಔದ್ಯೋಗಿಕ ರಾಸಾಯನಿಕಗಳು ಹಾಗೂ ಎಕ್ಸ್ ರೇಗಳಿಗೆ ಹೆಚ್ಚು ಎಕ್ಸ್ಪೋಸ್ ಆಗದಂತೆ ನೋಡಿಕೊಳ್ಳಿ.
  •     ವೈಟ್ ಬ್ರೆಡ್, ಪಿಸ್ತಾ, ಬಿಸ್ಕತ್ಗಳಂಥ ಆಹಾರ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಇಂಥ ಪದಾರ್ಥಗಳನ್ನು ಆದಷ್ಟು ದೂರವಿಡಿ.
  •     ಟೀ ಸ್ಪೂನ್ನಷ್ಟು ಕೆನೆ, ಒಂದು ಸ್ಕೂಪ್ ಐಸ್ ಕ್ರೀಂ, ಕೊಬ್ಬಿರುವ ಲೋಟದಷ್ಟು ಹಾಲು ಸಹ ಅಪಕ್ವ ವೀರ್ಯಗಳ ಸೃಷ್ಟಿಗೆ ಕಾರಣವಾಗಬಲ್ಲದು.
  •     ಎಳ್ಳು, ಮೀನು ಪದಾರ್ಥಗಳು, ಬಾದಾಮಿ ದೇಹಕ್ಕೆ ಅಗತ್ಯವಿರುವ ಸತುವನ್ನು ಉತ್ಪಾದಿಸುತ್ತದೆ. ಇದರಿಂದ ವೀರ್ಯಗಳ ಕ್ವಾಲಿಟಿ ಮತ್ತು ಕ್ವಾಂಟಿಟಿ ಉತ್ತಮಗೊಳ್ಳುತ್ತದೆ.  ಕ್ಯಾರೆಟ್, ಹಾಲು, ಮೊಟ್ಟೆ, ಕಿತ್ತಳೆ, ಸ್ಟ್ರಾಬೆರ್ರಿ, ನೆಲಗಡಲೆ, ಬಸಳೆಗಳಲ್ಲಿ ವಿಟಮಿನ್ 'ಎ', 'ಸಿ' ಹಾಗೂ 'ಇ' ಹೆಚ್ಚಾಗಿದ್ದು, ಆರೋಗ್ಯವಂತ ವೀರ್ಯವನ್ನು ಸೃಷ್ಟಿಸುತ್ತದೆ.
  •     ಸ್ಟ್ರಾಬೆರ್ರಿ, ಬ್ಲ್ಯಾಕ್ಬೆರ್ರಿ, ಕ್ಯಾನ್ಬೆರ್ರಿ, ಬೆಳ್ಳುಳ್ಳಿ, ಟೊಮೇಟೊ, ಕಲ್ಲಂಗಡಿಗಳು ದೇಹದಲ್ಲಿನ ವಿಷಯುಕ್ತ ಅಂಶಗಳನ್ನು ಹೋಗಲಾಡಿಸಿ, ವೀರ್ಯಗಳು ಡ್ಯಾಮೇಜ್ ಆಗುವುದನ್ನು ತಪ್ಪಿಸುತ್ತವೆ.
ಪರೀಕ್ಷೆಗಳು ಯಾವವು?
  •     ಟೆಸ್ಟೊಸ್ಟೆರೋನ್ ಸೇರಿದಂತೆ ರಕ್ತದಲ್ಲಿರುವ ಹಾರ್ಮೋನ್ ಮಟ್ಟ ಪರೀಕ್ಷೆ.
  •     ರಕ್ತದಲ್ಲಿರುವ ಸಕ್ಕರೆ ಅಂಶ.
  •     ವೀರ್ಯ ವಿಶ್ಲೇಷಣೆ.
  •     ವೀರ್ಯಾಣುಗಳ ಎಣಿಕೆ.
  •     ವೀರ್ಯಾಣುಗಳ ಚಲನಶೀಲತ್ವ ಪರೀಕ್ಷೆ.
  •     ವೀರ್ಯಗಳ ಆಕಾರ ಮತ್ತು ರಚನಾ ಟೆಸ್ಟ್.
  •     ಸ್ಖಲನಗೊಂಡಾಗ ಬಿಡುಗಡೆಯಾಗುವ ವೀರ್ಯಗಳ ಸಂಖ್ಯೆ.
  •     ವೀರ್ಯಾಣುಗಳ ಸಾವಿನ ಪ್ರಮಾಣ. ಇದು ಶೇ.40ಕ್ಕಿಂತ ಹೆಚ್ಚಿದ್ದರೆ ಫರ್ಟಿಲಿಟಿ ಪ್ರಮಾಣ ಕಡಿಮೆ ಇರುತ್ತದೆ.
  •     ಸ್ಪರ್ಮ್ ಫಿಶ್ ಎಂಬ ಪರೀಕ್ಷೆ ಕ್ರೋಮೋಸೋಮ್ ವಿಕೃತಿಯನ್ನು ತೋರಿಸುತ್ತದೆ.
ತಪ್ಪು ತಿಳೀಬೇಡ್ರಣ್ಣೋ...
  •     ಎಲ್ಲ ಸೈಜ್ ಹಾಗೂ ಶೇಪ್ನ ಶಿಶ್ನಗಳೂ ವೀರ್ಯವನ್ನು ಉತ್ಪಾದಿಸಬಲ್ಲದು.
  •     ನಪುಂಸಕತೆ ಹಾಗೂ ಫಲವತ್ತತೆ ಇಲ್ಲದಿರುವುದಕ್ಕೆ ವ್ಯತ್ಯಾಸವಿದೆ. ಫಲವತ್ತತೆ ಇಲ್ಲದೆಯೂ ಲೈಂಗಿಕವಾಗಿ ಸಮರ್ಥರಾಗಿರಬಹುದು.
  •     ಹಸ್ತಮೈಥುನ ವೀರ್ಯ ಉತ್ಪತ್ತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
  •     ವಾರಗಟ್ಟಲೆ ಲೈಂಗಿಕ ಕ್ರಿಯೆಯಿಂದ ದೂರ ಉಳಿದರೂ ವೀರ್ಯ ಉತ್ಪತ್ತಿ ಹೆಚ್ಚುವುದಿಲ್ಲ. ಬದಲಾಗಿ ಚಲನಶೀಲತೆ ಕಡಿಮೆಯಾಗುತ್ತದೆ.
  •     ದೈನಂದಿನ ಲೈಂಗಿಕ ಕ್ರಿಯೆಯಿಂದಲೂ ಸ್ಪರ್ಮ್ ಉತ್ಪತ್ತಿ ಹೆಚ್ಚಾಗದೇ ಹೋದರೂ, ಅಂಡಾಣು ಬಿಡುಗಡೆಯಾಗುವಾಗ ಉಪಯೋಗಕ್ಕೆ ಬರಬಹುದು.
  •     ಖಾರ ಪದಾರ್ಥಗಳು ತಿನ್ನುವುದರಿಂದ ಸ್ಪರ್ಮ್ ಉತ್ಪತ್ತಿಯಲ್ಲಿ ಹೆಚ್ಚು ಕಡಿಮೆಯಾಗುವುದಿಲ್ಲ.
  •     ಹೆಣ್ಣಿನ ಜನನಾಂಗದಲ್ಲಿ ಉತ್ಪತ್ತಿಯಾಗುವ ದ್ರವ ಪದಾರ್ಥ ವೀರ್ಯವನ್ನು ಹೆಚ್ಚು ಚಲನಶೀಲವಾಗಿರಲು ಸಹಕರಿಸುತ್ತದೆ.
  •     ಹೊತ್ತೊತ್ತಿಗೆ ಊಟ ಮಾಡಿ, ಪೌಷ್ಟಿಕಾಂಶಯುತ ಆಹಾರ ತಿಂದು, ಸಿಗರೇಟ್ ಸೇದೋದ್, ಕುಡಿಯೋದನ್ನು ಬಿಟ್ಟು, ವ್ಯಾಯಾಮವನ್ನೆಲ್ಲ ನಿಯಮಿತವಾಗಿ ಮಾಡಿದರೆ ಸ್ಪರ್ಮ್ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚುತ್ತದೆ.
  •     ಆನಾರೋಗ್ಯ, ತಾಪಮಾನ, ತೆಗೆದುಕೊಳ್ಳುತ್ತಿರುವ ಔಷಧಿಗಳ ಆಧಾರದ ಮೇಲೆ ಸ್ಪರ್ಮ್ ಕೌಂಟ್ ವಿಭಿನ್ನವಾದ ಫಲಿತಾಂಶ ನೀಡಬಲ್ಲದು. ಆದ್ದರಿಂದ ವೀರ್ಯಗಳ ಪರೀಕ್ಷೆಗೆ ಹೋಗುವಾಗ ಈ ಎಲ್ಲ ಅಂಶಗಳ ಮೇಲೂ ಗಮನವಿರಲಿ.
- ಚೆನ್ನು ಮೂಲಿಮನಿ
kp.channu@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!