ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಪೌಷ್ಟಿಕಾಂಶ ಉಳ್ಳ ಆಹಾರ ಸೇವನೆಯಿಂದ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಹಾಗಾಗಿ ಆಹಾರ ಸೇವನೆ ಯಾವ ಮಟ್ಟದಲ್ಲಿರಬೇಕು, ಯಾವ ಯಾವ ಆಹಾರ ಪದಾರ್ಥಗಳ ಸೇವನೆ ದೇಹಕ್ಕೆ ಬೇಕು ಎಂಬ ಬಗ್ಗೆ ತಿಳಿವಳಿಕೆ ಇದ್ದರೆ ಚೆನ್ನ ಅಲ್ಲವೇ..?
- ಕಡಿಮೆ ಕ್ಯಾಲರಿ ಡಯಟ್.
- ಪ್ರತಿದಿನ ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸಬೇಕು (ಮೂರು ಬಟ್ಟಲು ಹಾಲಿಗೆ ಸಮವಿರುವಂತಿರಬೇಕು).
- 5 ದಿನಗಳಿಗೊಮ್ಮೆ ಹಳದಿ, ಕೆಂಪು , ಆರೆಂಜ್ ಬಣ್ಣದ ಹಣ್ಣುಗಳನ್ನು ತಿನ್ನಬೇಕು. ನಿಂಬೆ ಹಣ್ಣು ಒಳಗೊಂಡತೆ ಹಸಿರು ಸೊಪ್ಪು ಮತ್ತು ತರಕಾರಿಯ ಸೇವನೆ ದೇಹಕ್ಕೆ ಮುಖ್ಯವಾಗಿದೆ.
- ಪ್ರತಿದಿನ 25ರಿಂದ 35ಗ್ರಾಂ ನಷ್ಟು ನಾರು ಪದಾರ್ಥ ಸೇವಿಸಬೇಕು. ಬೆಳಗಿನ ಉಪಹಾರವಾಗಿ ಇಡ್ಲಿ ಸೇವಿಸಿ.
- ಬೆಳಗಿನ ಉಪಾಹಾರವನ್ನು ತಪ್ಪಿಸಬೇಡಿ.
- ಅಡುಗೆಯಲ್ಲಿ ಧಾನ್ಯಗಳಿಂದ ಮಾಡಿದ ಬಿಳಿ ಹಿಟ್ಟನ್ನು ಸಾಧ್ಯವಾದಷ್ಟು ಬಳಸಿ.
- ಜಂಕ್ ಫುಡ್‌ಗೆ ಟಾಟಾ ಹೇಳಿ ನ್ಯೂಟ್ರಿಶಿಯಸ್ ಫುಡ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.
- ವಿಟಮಿನ್ 'ಇ' ಮತ್ತು 'ಬಿ' ಒಳಗೊಂಡಿರುವ ಗೋಧಿ ಮತ್ತು ಮೊಳಕೆ ಕಾಳುಗಳ ಸೇವನೆ ಅತಿ ಒಳ್ಳೆಯದು.
- ದ್ರವದಲ್ಲಿ ಕರಗುವ ನಾರು ಪದಾರ್ಥಗಳನ್ನು ಸೇವಿಸಿ.
- ಸಾಧ್ಯವಾದಷ್ಟು ಸಾವಯವ ಪದಾರ್ಥಗಳನ್ನು ನೋಡಿ ಕೊಂಡುಕೊಳ್ಳಿ.
- ಗ್ರೀನ್ ಟೀ ಸೇವನೆ ನಮ್ಮನ್ನು ಚೇತೋಹಾರಿಯಾಗಿ ಇಡಬಲ್ಲದು.
- ಕೆಂಪು ದ್ರಾಕ್ಷಿ ಹಣ್ಣು ಬಳಕೆ.
- ಹೆಚ್ಚು ಪ್ರೊಟಿನ್ ಮತ್ತು ವಿಟಮಿನ್‌ಯುಕ್ತ ಆಹಾರ ಪದಾರ್ಥಗಳ ಬಳಕೆ.
- ಶೇ. 10 ಕ್ಕಿಂತ ಅಧಿಕ ಕ್ಯಾಲೋರಿಯುಕ್ತ ಪದಾರ್ಥಗಳು ಅಧಿಕ ಕೊಬ್ಬಿನಾಂಶಗಳಿಂದ ಕೂಡಿರುತ್ತವೆ. ಹೀಗಾಗಿ ಆಹಾರ ಪದಾರ್ಥ ಕೊಳ್ಳುವಾಗ ನ್ಯೂಟ್ರಿಶನ್ ಪ್ರಮಾಣ ನೋಡಿ ಕೊಳ್ಳಿ.
- ಸಮಯ ಸಿಕ್ಕಾಗೆಲ್ಲ ತಿನ್ನುವುದು ಬಿಟ್ಟು ಸರಿಯಾದ ಆಹಾರ ಕ್ರಮದ ಹವ್ಯಾಸ ರೂಢಿಸಿಕೊಳ್ಳಿ.
ಪಥ್ಯ ಪಥ
- ಪಾವನ ಎಚ್.ಎಸ್
pavanahsgowda@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics