ಆಸಿಡಿಟಿ ಓಡಿಸಿ
ಗ್ಯಾಸ್ಟ್ರಿಕ್ನಿಂದ ಬಳಲುತ್ತಿದ್ದೀರಾದರೆ ಒಂದೆರಡು ಲವಂಗ ಬಾಯಿಗೆ ಹಾಕಿಕೊಳ್ಳಿ.
ಗ್ಯಾಸ್ಟ್ರಿಕ್ನಿಂದ ಬಳಲುತ್ತಿದ್ದೀರಾದರೆ ಒಂದೆರಡು ಲವಂಗ ಬಾಯಿಗೆ ಹಾಕಿಕೊಳ್ಳಿ. ಅದರ ರಸ ತೇಗಿನ ರೂಪದಲ್ಲಿ ಗ್ಯಾಸ್ ಹೊರ ಹಾಕಿ ಅಸಿಡಿಟಿಯನ್ನು ಶಮನಗೊಳಿಸುತ್ತದೆ. ಒಂದು ಚಮಚ ಜೀರಿಗೆ ಕಾಳನ್ನು ಹುರಿದು ಪುಡಿ ಮಾಡಿ, ನೀರಿನೊಂದಿಗೆ ಬೆರೆಸಿ ಪ್ರತಿ ಊಟದ ಜೊತೆಗೆ ಸೇವಿಸುತ್ತಾ ಬಂದರೆ ಗ್ಯಾಸ್ಟ್ರಿಕ್ ಮಂಗಮಾಯವಾಗುವುದರಲ್ಲಿ ಅನುಮಾನವಿಲ್ಲ. ಕರಿಮೆಣಸಿನಕಾಳಿನ ಪುಡಿ ಬೆರೆಸಿದ ಮಜ್ಜಿಗೆಯೂ ಅಸಿಡಿಟಿ ಓಡಿಸುವಲ್ಲಿ ಸಹಕಾರಿ.