ಸಂಗ್ರಹ ಚಿತ್ರ 
ಆರೋಗ್ಯ-ಜೀವನಶೈಲಿ

ಸಿಂಗಾಪುರದಲ್ಲಿರುವ 13 ಭಾರತೀಯರಲ್ಲಿ ಝಿಕಾ ವೈರಸ್ ಸೋಂಕು ಪತ್ತೆ

ವಿಶ್ವದಾದ್ಯಂತ ಸಾಕಷ್ಟು ಭೀತಿ ಹುಟ್ಟಿಸಿರುವ ಝಿಕಾ ವೈರಸ್ ಇದೀಗ ಭಾರತೀಯರಿಗೂ ಅಂಟಿಕೊಂಡಿದ್ದು, ಸಿಂಗಾಪುರದಲ್ಲಿರುವ 13 ಭಾರತೀಯರಲ್ಲಿ ಈ ವೈರಸ್'ನ ಸೋಂಕು...

ನವದೆಹಲಿ: ವಿಶ್ವದಾದ್ಯಂತ ಸಾಕಷ್ಟು ಭೀತಿ ಹುಟ್ಟಿಸಿರುವ ಝಿಕಾ ವೈರಸ್ ಇದೀಗ ಭಾರತೀಯರಿಗೂ ಅಂಟಿಕೊಂಡಿದ್ದು, ಸಿಂಗಾಪುರದಲ್ಲಿರುವ 13 ಭಾರತೀಯರಲ್ಲಿ ಈ ವೈರಸ್'ನ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಈ ಕುರಿತಂತೆ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಮಾಹಿತಿ ನೀಡಿದ್ದು, ಸಿಂಗಾಪುರದಲ್ಲಿರುವ 13 ಭಾರತೀಯರಿಗೆ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಝಿಕಾ ವೈರಸ್ ಸೋಂಕು ಗರ್ಭಿಣಿಯರಿಗೆ ಶೀಘ್ರಗತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕು ಪೀಡಿತ ಗರ್ಭಿಣಿ ಮಹಿಳೆಯರಿಗೆ ಜನಿಸುವ ಮಕ್ಕಳ ತಲೆ ಗಾತ್ರ ಚಿಕ್ಕದಾಗಿರುತ್ತದೆ. ಮಗು ಜನಿಸಿದ ನಂತರ ಹಲವು ಸಮಸ್ಯೆಗಳುಂಟಾಗುತ್ತದೆ ಎಂದು ಅಮೆರಿಕ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೊಳ್ಳೆಗಳಿಂದ ಹರಡುವ ಈ ಝಿಕಾ ವೈರಸ್ ರೋಗವು ಮೊದಲು ಸಿಂಗಾಪುರದ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಲ್ಲಿ ಕಂಡು ಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಏನ್ ಇವನಾ ಉಪನಾಯಕ: ವೈಭವ್ ಸೂರ್ಯವಂಶಿ ವಿಕೆಟ್ ಪಡೆಯಲು ಸ್ಲೆಡ್ಜಿಂಗ್ ಮಾಡಿದ ತಿಲಕ್ ವರ್ಮಾ, Video Viral!

ಹಿಂದೂ ದೇವತೆಗಳಿಗೆ ಅಪಮಾನ: ನಿಶು ಆಜಾದ್ ವಿರುದ್ಧ ದೂರು ದಾಖಲಿಸಿದ ಸುಪ್ರೀಂ ಕೋರ್ಟ್ ವಕೀಲ!

ಕೊಪ್ಪಳ: ಕೆಲಸದಿಂದ ತಪ್ಪಿಸಿಕೊಳ್ಳಲು ಭಾರಿ ಪ್ಲಾನ್; AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದ ಮೈಗಳ್ಳ!

ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ; ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?