ಆರೋಗ್ಯ

ಬಗಲಲ್ಲೇ ಇರುವ ದುಷ್ಮನ್ ನಿಪಾ ವೈರಾಣು ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿರುವುದೇನು? 

Harshavardhan M

ಬೆಂಗಳೂರು: ನೆರೆಯ ಕೇರಳದಲ್ಲಿ ನಿಪಾ ವೈರಾಣು ಹಾವಳಿ ಹೆಚ್ಚುತ್ತಿರುವಂತೆಯೇ ಕರ್ನಾಟಕದಲ್ಲಿ ವೈದ್ಯರು ತಮ್ಮ ರೋಗಿಗಳಿಗೆ ನಿಪಾ ವೈರಾಣು ಬಗ್ಗೆ ಮುಂಜಾಗರೂಕತಾ ಕ್ರಮಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ, ಸೋಂಕಿನ ಗುಣಲಕ್ಷಣಗಳನ್ನು ಪಟ್ಟಿ ಮಾಡಿ ನೀಡುತ್ತಿದ್ದಾರೆ. 

ಕರ್ನಾಟಕದಲ್ಲಿ ಇದುವರೆಗೂ ಒಂದೂ ನಿಪಾ ಪ್ರಕರಣ ದಾಖಲಾಗಿಲ್ಲ ನಿಜ ಆದರೆ ಪಕ್ಕದ ರಾಜ್ಯದಲ್ಲೇ ನಿಪಾ ಆತಂಕದ ವಾತಾವರಣ ಸೃಷ್ಟಿಸಿರುವುದರಿಂದ, ಒಂದಷ್ಟು ಮಾಹಿತಿಯನ್ನು ತಿಳಿದುಕೊಂಡಿರುವುದು ಉತ್ತಮ.

ನಿಪಾ ವೈರಾಣು ಸೋಂಕು ಕೊರೊನಾ ಸೋಂಕಿನ ರೋಗ ಲಕ್ಷಣಗಳನ್ನೇ ಹೊಂದಿರುತ್ತದೆ. ಕೆಮ್ಮು, ಗಂಟಲು ಕೆರೆತ, ತಲೆಸುತ್ತು, ತಲೆ ನೋವು, ಸುಸ್ತು, ಮಾಂಸಖಂಡ ಸೆಳೆತ, ಗೊಂದಲ, ಬೆಳಕಿನ ಅಲರ್ಜಿ. ರೋಗಿ ಪ್ರಜ್ನಾಶೂನ್ಯರಾಗಿ ಸಾವನ್ನಪ್ಪುವ ಅಪಾಯವೂ ಇರುತ್ತದೆ.

ಹಣ್ಣು, ಖರ್ಜೂರ ಸಿರಪ್ ಸೇವಿಸುವ ವ್ಯಕ್ತಿಗಳಲ್ಲಿ ನಿಪಾ ರೋಗಕ್ಕೆ ಹೆಚ್ಚಾಗಿ ಕಂಡು ಬಂಡಿದೆ. ಅಲ್ಲದೆ ನಿಪಾ ಸೋಂಕಿತರ ಸಂಪರ್ಕದಿಂದಲೂ ಈ ರೋಗ ಹರಡುತ್ತದೆ. ನಿಪಾ ವೈರಾಣು ಕಲುಷಿತಗೊಂಡ ಆಹಾರ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. 

ನಿಪಾ ರೋಗಿಗಳಲ್ಲಿ ಸಾವನ್ನಪ್ಪುವ ಪ್ರಮಾಣ ಶೇ. 40- 75 ರಷ್ಟಿರುತದೆ ಎಂದು ವೈದ್ಯರು ತಿಳಿಸಿದ್ದಾರೆ. ಅರ್ಧ ತಿಂದು ಬಿಟ್ಟ ಹಣ್ಣುಗಳನ್ನು ತಿನ್ನದೇ ಇರುವುದು, ಹಣ್ಣು ಮತ್ತು ತರಕಾರಿ ಸೇವಿಸುವ ಮುನ್ನ ಸ್ವಚ್ಛವಾಗಿ ತೊಳೆಯುವುದು ಮತ್ತು ಮಾಸ್ಕ್ ಧರಿಸುವುದು ನಿಪಾ ಸೋಂಕಿನಿಂದ ಪಾರಾಗುವ ಮಾರ್ಗಗಳು.

SCROLL FOR NEXT