ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ವಿಮರ್ಶೆಗೆ ಗುರುತರವಾದ ಜವಾಬ್ದಾರಿಯಿದೆ

Srinivasa Murthy VN
Updated On : 25 Oct 2013, 5:14 am

ಮುಂಬೈ: ವಿಮರ್ಶೆ ಎಂಬುದು ಸಾಹಿತ್ಯದ ಪ್ರಮುಖ ಅಂಗವಾಗಿ ಇಂದು ಬೆಳೆದಿದೆ. ವಿಮರ್ಶಕನಾದವನು ಬಲು ಸೂಕ್ಷ್ಮವಾಗಿ ಹೆಜ್ಜೆಗಳನ್ನಿಡಬೇಕಾಗುತ್ತದೆ. ಹೀಗಾಗಿ ವಿಮರ್ಶಕನಿಗೆ ಗುರುತರವಾದ ಜವಾಬ್ದಾರಿಯಿದೆ ಎಂದು ಅಕ್ಷಯ ಮಾಸಿಕದ ಸಂಪಾದಕ, ವಿಮರ್ಶಕ ಡಾ. ಈಶ್ವರ ಅಲೆವೂರು ಅಭಿಪ್ರಾಯಪಟ್ಟರು.   ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿವಿ ಆಯೋಜಿಸಿದ್ದ ಕೃತಿವಿಮರ್ಶೆ ಕಮ್ಮಟದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ ವಿಮರ್ಶೆ ವಸ್ತುನಿಷ್ಟವಾಗಿದ್ದಷ್ಟೂ ಸಾಹಿತ್ಯದ ಬಲವರ್ಧನೆಗೆ ಒಳಿತು ಎಂದು ಹೇಳಿ ಈಚೆಗೆ ಬೆಳಕು ಕಂಡ ಮುಂಬೈನ ಲೇಖಕ ಗೋಪಾಲ ತ್ರಾಸಿ ಅವರ ಕತೆಯೊಳಗಣ ಬದುಕು ಕೃತಿಯ ವಿಮರ್ಶೆಯನ್ನು ಸಾದರಪಡಿಸಿದರು. ಕನ್ನಡ ವಿಭಾಗ ಮುಂಬೈ ವಿವಿ ವಿದ್ಯಾರ್ಥಿ ಮಿತ್ರರಾದ ಪದ್ಮರೇಖಾ, ಮಧುಸೂಧನರಾವ್  ಅವರು ಕೃಷ್ಣಮೂರ್ತಿ ಹನೂರು ಅವರ ಹೊಸ ಕಾದಂಬರಿ ಅಜ್ಞಾತನೊಬ್ಬನ ಆತ್ಮಚರಿತ್ರೆಯ ಕುರಿತು ಪ್ರಬಂಧ ಮಂಡಿಸಿದರು. ದೀಪಾ ಪ್ರಭು ಅವರು ಮುಂಬೈನ ಲೇಖಕಿ ಮೇರಿ ಪಿಂಟೋ ಅವರ ಕಥಾ ಸಂಕಲನ ಆಸರೆಯ ಕುರಿತು, ಸರೋಜಿನಿ ತರೆ, ಅಶೋಕ ಕುಮಾರ್ ವಳದೂರು ಅವರು ಡಾ. ಜಿ.ಡಿ. ಜೋಶಿ ಅವರ ಮುಂಬೈ ಮನೆ ಕೃತಿಗಳನ್ನು ಸಮೀಕ್ಷೆ ಮಾಡಿದರು. ಪರಸಪ್ಪ ಹರಿಜನ ಕಾರಂತರ ಚೋಮನ ದುಡಿಯ ಬಗೆಗೆ, ಶ್ರೀ ಶೈಲ ಅವರು ಬೆಟ್ಟದ ಜೀವದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ವಿ.ಎಸ್. ಶ್ಯಾನಭಾಗ್, ಸತೀಶ್ ಬಂಗೇರ, ದುರ್ಗಪ್ಪ ಕೋಟಿಯವರ ವಿಮರ್ಶೆಯ ಕುರಿತು ವಿಚಾರಗಳನ್ನು ಹಂಚಿಕೊಂಡರು. ಡಾ. ಜಿ.ಎನ್. ಉಪಾಧ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement