ಬಹ್ರೈನ್ ಕನ್ನಡ ಸಂಘದ ನೂತನ ಆಡಳಿತ ಮಂಡಳಿ
ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹ್ರೈನ್‌ನ 2014-2015ನೇ ಸಾಲಿಗೆ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ.
ಬಹ್ರೈನ್: ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹ್ರೈನ್‌ನ 2014-2015ನೇ ಸಾಲಿಗೆ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ನಡೆದ 36ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ರಾಜೇಶ್ ಬಿ. ಶೆಟ್ಟಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನೂತನ ಆಡಳಿತ ಮಂಡಳಿಯ ಸದಸ್ಯರ ವಿವರ ಇಂತಿದೆ.
ಆರ್.ಎಮ್. ಪಾಟೀಲ್- ಉಪಾಧ್ಯಕ್ಷರು, ಕಿರಣ್ ಉಪಾಧ್ಯಾಯ- ಪ್ರಧಾನ ಕಾರ್ಯದರ್ಶಿ, ಸತೀಶ್ ಕೊಲ್ಯ-ಖಜಾಂಚಿ, ಮೋಹನ್ ಎಡನೀರ್- ಮನರಂಜನಾ ಕಾರ್ಯದರ್ಶಿ, ಜಯರಾಜ್ ಭಂಡಾರಿ-ಕ್ರೀಡಾ ಕಾರ್ಯದರ್ಶಿ, ಸಂಜೀವ ಶೆಟ್ಟಿ- ಸಹ ಕಾರ್ಯದರ್ಶಿ, ರಘುರಾಮ್ ಪೂಜಾರಿ-ಉಪಮನರಂಜನಾ ಕಾರ್ಯದರ್ಶಿ, ಸತೀಶ್ ಮಲ್ಪೆ- ಉಪಖಜಾಂಚಿ, ಅಖ್ತರ್ ಅಹ್ಮದ್- ಸದಸ್ಯರು, ಚೋಮನಹಳ್ಳಿ-ಸುರೇಶ್- ಸದಸ್ಯರು, ಚಂದ್ರಮೆಂಡನ್-ಸದಸ್ಯರು ಮತ್ತು ಕೃಷ್ಣನೈಂಪಳ್ಳಿ -ಆಂತರಿಕ ಲೆಕ್ಕ ಪರಿಶೋಧಕರು.
ಜೂ.8 ರಂದು ಕಯ್ಯಾರ ಕಿಞ್ಞಣ್ಣರೈ ನೂರರ ಉತ್ಸವ
ಕಾಸರಗೋಡು: ನಾಡೋಜ ಡಾ. ಕಯ್ಯಾರ ಕಿಞಣ್ಣರೈ ಅವರು ಜೂ. 2014ರಂದು ನೂರು ವರ್ಷ ಪೂರೈಸುತ್ತಿರುವ ಪ್ರಯುಕ್ತ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ -100 ಜನ್ಮಶತಮಾನೋತ್ಸವ ಸಮಿತಿ, ಕಾಸರಗೋಡು ಇದರ ನೇತೃತ್ವದಲ್ಲಿ 100 ಕಾರ್ಯಕ್ರಮಗಳನ್ನು ಅಖಿಲ ಭಾರತ ಮಟ್ಟದಲ್ಲಿ ಹಮ್ಮಿಕೊಳ್ಳಲು ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಕಯ್ಯಾರರ ಗಾಯನ, ವಿಶೇಷೋಪನ್ಯಾಸ, ಕಯ್ಯಾರರ ಸಾಹಿತ್ಯ ಗೋಷ್ಠಿ, ಕಾವ್ಯ, ನಾಡು-ನುಡಿ, ಬಾಲಸಾಹಿತ್ಯ, ಭಾಷಾಂತರ, ಪತ್ರಿಕೋದ್ಯಮ, ಕನ್ನಡ ಸಂಘಟನೆ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಶತಮಾನೋತ್ಸವ ವರ್ಷಾಚರಣೆಯ ಕಾರ್ಯಕ್ರಮಗಳನ್ನು ಕಾಸರಗೋಡಿನ ಪೆರಡಾಲ ಕವಿತಾ ಕುಟೀರದಲ್ಲಿ 08 ಜೂನ್ 2014ರಂದು ಹಮ್ಮಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪತ್ರ ಮುಖೇನ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡ ಗ್ರಾಮ, ಪಾರೆಕಟ್ಟೆ ರಸ್ತೆ, ಅಂಚೆ ರಾಮದಾಸ ನಗರ, ಕಾಸರಗೋಡು- 671124, ಕೇರಳ ರಾಜ್ಯ, ಮೊ. 944 8572016 ಊಟಛ್ಝಟ:ಝ್ಝಢ್ಠಛಟಓಛಡಛ್ಠ್ಜ್ಟಜಅ್ಜಟಛ್ಝಟ.್ಛ್ಟಟ ಇವರನ್ನು ಸಂಪರ್ಕಿಸಬಹುದು.