ಸರಿಯಾದ ಔಷಧ ಬಳಕೆಯಿಂದ ರೋಗಿಗಳ ಹಿತರಕ್ಷಣೆ ಸಾಧ್ಯ
ಅಡಿಲೇಡ್: ಔಷಧಗಳ ವಿವೇಚನಾಯುಕ್ತ ಉಪಯೋಗದಿಂದ ರೋಗಿಗಳ ಹಿತರಕ್ಷಣೆ ಸಾಧ್ಯ ಎಂದು ಮೈಸೂರು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ಆಸ್ಟ್ರೇಲಿಯಾದ ಅಡಿಲೇಡ್‌ನ ರೀಪ್ಯಾಟ್ರಿಯೇಷನ್ ಜನರಲ್ ಹಾಸ್ಪಿಟಲ್‌ನಲ್ಲಿ ಏರ್ಪಡಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠ ಮತ್ತು ಈ ಹಾಸ್ಪಿಟಲ್‌ಗಳ ಭಾರತದಲ್ಲಿ ಆಚರಣೆ ಆಧಾರಿತ ಔಷಧ ಕಲಿಕೆ ಈ ಒಡಂಬಡಿಕೆಯ ಎರಡು ದಶಕಗಳ ಸ್ಮರಣೆಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಎರಡು ಶಿಕ್ಷಣ ಸಂಸ್ಥೆಗಳು ಕಳೆದ ಎರಡು ದಶಕಗಳಿಂದಲೂ ಹೊಂದಿರುವ ಅಪರೂಪದ ಸಂಬಂಧ ತುಂಬ ಪರಿಣಾಕಾರಿಯು, ಉಪಯುಕ್ತವೂ ಆಗಿದೆ ಎಂದರು.
ದಕ್ಷಿಣ ಅಡಿಲೇಡ್ ಸ್ಥಳೀಯ ಆರೋಗ್ಯ ಸಂಪರ್ಕ ವ್ಯವಸ್ಥೆಯ ಸಿಇಒ ಪ್ರೊ.ಬೆಲಿಂದ ಮೊಯಿಸ್ ಮಾತನಾಡಿ, ಇಂದು ಬಹಳ ಅಪೂರ್ವವಾದ ದಿನ. ಜೆಎಸ್‌ಎಸ್ ಮತ್ತು ಪಿರ್ಯಾಟ್ರಿಯೇಷನ್ ಸಂಸ್ಥೆಗಳು ತಮ್ಮ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿವೆ. ಇದರ ಪರಿಣಾಮವಾಗಿ ಔಷಧ ವಿಜ್ಞಾನದ ಶಿಕ್ಷಣ ಮತ್ತು ಪ್ರಯೋಗಗಳು ನಿಜಕ್ಕೂ ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.
ಆರ್‌ಜಿಎಚ್ ಸಂಸ್ಥೆಯ ಮಾಜಿ ಮುಖ್ಯ ಫಾರ್ಮಸಿಸ್ಟ್ ಫ್ರಾಂಕ್ ಮೇ ಮತ್ತು ಕ್ಲಿನಿಕಲ್ ಫಾರ್ಮಸಿಸ್ಟ್ ಮಿ. ಕೆರಿನ್ ನೈಫೋರ್ಟ್-ಹಾನ್ಸ್‌ಸೆನ್ ಅವರು ಈ ಎರಡು ಸಂಸ್ಥೆಗಳ ನಡುವಣ ಅರ್ಥಪೂರ್ಣ ಪ್ರಯೋಗ ಯಶಸ್ವಿ ಕುರಿತಾಗಿ ಸಂತಸ ವ್ಯಕ್ತಪಡಿಸಿದರು.
ಜೆಎಸ್‌ಎಸ್ ವಿವಿ ಕುಲಪತಿ ಹಾಗೂ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಬಿ. ಸುರೇಶ್, ಆರ್‌ಜಿಎಚ್ ಸಂಸ್ಥೆಯ ಡ್ರಗ್ ಅಂಡ್ ತೆರಪೆಟಿಕ್ ಇನ್‌ಫಾರ್ಮೇಷನ್ ಸರ್ವಿಸ್ ವಿಭಾಗದ ನಿರ್ದೇಶಕಿ ಡೆಬ್ರ ರೊವೆಟ್, ಆರ್‌ಜಿಎಚ್ ಫಾರ್ಮಸಿ ಸರ್ವಿಸಸ್ ನಿರ್ದೇಶಕಿ ಕ್ರಿಸ್ ಆಲ್ಡರ್‌ಮಮನ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.