ಅಂತರ್ಕಾಲೇಜು ಯಕ್ಷಗಾನ: ಪೆರ್ಲ ಕಾಲೇಜು ಪ್ರಥಮ
ಕಾಸರಗೋಡು: ಕಣ್ಣೂರು ವಿವಿಯ ಕಲೋತ್ಸವ ಅಂಗವಾಗಿ ಪಯ್ಯನೂರು ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ಪೆರ್ಲ ನಲಂದಾ ಕಾಲೇಜು ಪ್ರದರ್ಶಿಸಿದ 'ಬಬ್ರುವಾಹನ ಕಾಳಗ' ಯಕ್ಷಗಾನ ಪ್ರಥಮ ಸ್ಥಾನ ಗಳಿಸಿದೆ. ಈ ತಂಡವನ್ನು ಸಬ್ಬಣ ಕೋಡಿ ರಾಮ್ ಭಟ್, ಸತೀಶ್ ಪುಣಿಂಚತ್ತಾಯ, ಬಾಲಕೃಷ್ಣ ಏಳ್ಕಾನ ನಿರ್ದೇಶಿಸಿದ್ದರು. ಅಧ್ಯಾಪಕ ಶಂಕರ ಖಂಡಿಗೆ ಸಂಚಾಲಕರಾಗಿ ಸಹಕರಿಸಿದರು. ಮುಮ್ಮೇಳದಲ್ಲಿ ವಿದ್ಯಾರ್ಥಿಗಳಾದ ಸಂತೋಷ್ ಕುಮಾರ್, ಸುನಿಲ್, ಶಾರದಾ, ಫೈಸಲ್, ದೀಕ್ಷಿತ್, ಪ್ರಜೀಶಾ, ಸುಪ್ರೀತಾ, ವಿನಯ್ ಮಾರಂಪಾಡಿ, ತೇಜಶ್ರೀ ಹಿಮ್ಮೇಳದಲ್ಲಿ ಶ್ರೀಧರ ಪಡ್ರೆ, ರಾಜೇಂದ್ರ ಪ್ರಸಾದ್ ಸಹಕರಿಸಿದರು.