ರಾಜ್ಯ

2016 ಗ್ರೀನ್ ಟ್ಯಾಲೆಂಟ್ಸ್ - ಸುಸ್ಥಿರ ಸಂಶೋಧನಾ ಪ್ರಶಸ್ತಿಗೆ ಅರ್ಜಿ ಆಹ್ವಾನ

ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ 2016/2017ನ್ನು ವಿಜ್ಞಾನ ವರ್ಷವನ್ನಾಗಿ ಆಚರಿಸುತ್ತಿದ್ದು...

ಬೆಂಗಳೂರು, ಏಪ್ರಿಲ್, 2016 :- ಜರ್ಮನಿಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ 2016/2017ನ್ನು ವಿಜ್ಞಾನ ವರ್ಷವನ್ನಾಗಿ ಆಚರಿಸುತ್ತಿದ್ದು, 2016 ರ  ಗ್ರೀನ್ ಟ್ಯಾಲೆಂಟ್ಸ್(ಹಸಿರು ಪ್ರತಿಭೆಗಳು) ಸಂಶೋಧನಾ ಸ್ಪರ್ಧೆಯನ್ನು 2009 ರಿಂದ ನಡೆಸುತ್ತಿದೆ. ಪ್ರತಿ ವರ್ಷ 25 ಯುವ ಸಂಶೋಧಕರನ್ನು ಗೌರವಿಸುತ್ತಿದೆ. ಹಲವಾರು ವಿಷಯಗಳಲ್ಲಿ ಸಂಶೋಧನೆ ನಡೆಸಿದ ಅನೇಕ ದೇಶಗಳ ಪ್ರತಿಭೆಗಳಿಗೆ ಈ ಗೌರವ ಲಭಿಸುತ್ತದೆ. ಈ ಬಾರಿ ಹವಾಮಾನ ಬದಲಾವಣೆ, ಮಾಲಿನ್ಯ,  ಅತಿಯಾದ ಮೀನುಗಾರಿಕೆಗಳು `ಸಮುದ್ರ ಮತ್ತು ಸಾಗರ’ ಗಳ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಕುರಿತು  ಸ್ಪರ್ಧೆಯ ಪ್ರವೇಶಗಳನ್ನು ಆಹ್ವಾನಿಸಲಾಗುತ್ತಿದೆ. ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿ ತೆರೆದಿದ್ದು ಎಲ್ಲರಿಗೂ ಗೆಲ್ಲಲು ಸಮಾನ ಅವಕಾಶಗಳಿರುತ್ತವೆ. ಸಂಪೂರ್ಣ ನಿಧಿ ಬೆಂಬಲ ಪಡೆದ ಜರ್ಮನಿ ಸಂದರ್ಶನದ ಅವಕಾಶ ಮತ್ತು ಎರಡು ವಾರಗಳ ವಿಜ್ಞಾನ ವೇದಿಕೆಯಲ್ಲಿ ಭಾಗವಹಿಸುವ ಆಹ್ವಾನವನ್ನು ಪ್ರಶಸ್ತಿಯ ಅಂಗವಾಗಿ ನೀಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಅಗ್ರ ಮಟ್ಟದ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಗೆ ಪ್ರವೇಶದ ಅವಕಾಶವೂ ಇರುತ್ತದೆ.
ತಮ್ಮ ಆಯ್ಕೆಯ ತಜ್ಞರೊಂದಿಗೆ ವೈಯಕ್ತಿಕ ಭೇಟಿ ಮತ್ತು ಕೆಲಸ ಮಾಡುವ ಅವಕಾಶ ಅಲ್ಲದೆ ಸಂಪೂರ್ಣ ನಿಧಿ ಬೆಂಬಲ ಪಡೆದ ಸಂಶೋಧನೆಯನ್ನು ಮೂರು ತಿಂಗಳ ಕಾಲ ವಿಜೇತರ ಆಯ್ಕೆಯ ಸಂಸ್ಥೆಗಳಲ್ಲಿ ನಡೆಸುವ ಸೌಲಭ್ಯ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ಮೇ 24, 2016 (ರಾತ್ರಿ 12 ಗಂಟೆ-ಸಿಇಟಿ) ಕೊನೆಯ ದಿನ. ಹೆಚ್ಚಿನ ವಿವರಗಳಿಗೆ www.greentalents.de ರಲ್ಲಿ ಸ್ಪರ್ಧೆಯ ವಿಭಾಗವನ್ನು ಸಂದರ್ಶಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!