ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರಗಿ: ರಸ್ತೆ ಅಪಘಾತದಿಂದ ಬಯಲಾಯ್ತು ಅಪಹರಣ ಕೇಸ್

ಅಪಹರಣ ಪ್ರಕರಣವನ್ನು ಬೇಧಿಸಲು ರಸ್ತೆ ಅಪಘಾತ ಪ್ರಕರಣ ಪೊಲೀಸರಿಗೆ ಸಹಾಯ ಮಾಡಿದೆ. ಜೇವರ್ಗಿ ತಾಲೂಕಿನ...

ಕಲಬುರಗಿ: ಅಪಹರಣ ಪ್ರಕರಣವನ್ನು ಬೇಧಿಸಲು ರಸ್ತೆ ಅಪಘಾತ ಪ್ರಕರಣ ಪೊಲೀಸರಿಗೆ ಸಹಾಯ ಮಾಡಿದೆ. ಜೇವರ್ಗಿ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಚವರ್ಲೆಟ್ ತವೇರಾ ವಾಹನ ಅಪಘಾತಕ್ಕೀಡಾಗಿತ್ತು. ಅಪಘಾತ ನಡೆದ ವೇಳೆ ವಾಹನದಲ್ಲಿದ್ದ ಲಾಂಗು, ಮಚ್ಚು ಸೇರಿದಂತೆ ಹಲವು ಮಾರಕಾಸ್ತ್ರಗಳು ರಸ್ತೆಗೆ ಬಿದ್ದಿದ್ದವು, ಇದನ್ನು ಗಮನಿಸಿದ ಸ್ಥಳೀಯರು ವಾಹನದಲ್ಲಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ನಂತರ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದಾಗ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ತವೇರಾ ವಾಹನದಲ್ಲಿ ಚಲಿಸುತ್ತಿದ್ದ ತಂಡ ಕಲಬುರಗಿ ತಾಲೂಕಿನ ಹಸನಾಪುರ ಗ್ರಾಮದ ಸಿದ್ದಲಿಂಗಪ್ಪ ಎಂಬಾತನನ್ನು ಕಿಡ್ನಾಪ್ ಮಾಡಿತ್ತು. ಹಸನಾಪುದಿಂದ ಆತನನ್ನು ವಿಜಯಾಪುರ ಜಿಲ್ಲೆಯ ಸಿಂಧಗಿ ತಾಲೂಕಿಗೆ ಕರೆದೊಯ್ಯುವಾಗ ಈ ಅಪಘಾತ ಸಂಭವಿಸಿತ್ತು.

ಸಿಂಧಗಿ ತಾಲೂಕಿನ ಓತಿಹಾಳ್ ಗ್ರಾಮದ ಬಲರಾಮ ಎಂಬಾತನಿಗೂ ಹಾಗೂ ಅಪಹರಣಗೊಂಡಿದ್ದ ಹಸನಾಪುರ ಗ್ರಾಮದ ಸಿದ್ಧಲಿಂಗಪ್ಪ ಎಂಬಾತನಿಗೂ ಹಣಕಾಸಿನ ವಿಷಯದಲ್ಲಿ ವ್ಯಾಜ್ಯ ಏರ್ಪಟ್ಟಿತ್ತು , ಹೀಗಾಗಿ ಆತನನ್ನು ಕಿಡ್ನಾಪ್ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ.

ಆದರೆ, ಮತ್ತೊಂದು ಹೇಳಿಕೆಯ ಪ್ರಕಾರ, ಸಿದ್ದಲಿಂಗಪ್ಪ ಸಹೋದರಿ ಮತ್ತು ಬಲರಾಮ ಪರಸ್ಪರ ಪ್ರೀತಿಸುತ್ತಿದ್ದರು, ಇದಕ್ಕೆ ಸಿದ್ದಲಿಂಗಪ್ಪ ವಿರೋಧ ವ್ಯಕ್ತ ಪಡಿಸಿದ ಕಾರಣ ಆತನನ್ನು ಅಪಹರಿಸಲಾಗಿತ್ತು ಎಂದು ಸಹ ಹೇಳಲಾಗಿದೆ.ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಿದ್ದಲಿಂಗಪ್ಪಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?