ಬೆಂಗಳೂರು: ನಿನ್ನೆ ಅಗ್ನಿ ದುರಂತಕ್ಕೀಡಾಗ ಖಾಸಗಿ ಬಸ್ಸಿನಲ್ಲಿ ಹುಬ್ಬಳ್ಳಿಗೆ ಪ್ರಯಾಣಿಸಬೇಕಿದ್ದ 59 ವರ್ಷದ ಶೈಲಜಾಗೆ ನಿನ್ನೆ ನಿಜಕ್ಕೂ ಅದೃಷ್ಟದ ದಿನವಾಗಿತ್ತು.
ಕಾಲು ಉಳುಕಿದ್ದರಿಂದಾಗಿ ಇವತ್ತು ಹೋಗುವುದು ಬೇಡ, ಇನ್ನೊಂದು ದಿನ ಹೋದರಾಯಿತು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರೆಂದು ಕೊನೆ ಕ್ಷಣದಲ್ಲಿ ಶೈಲಜಾರವರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿದ್ದು ಅವರಿಗೆ ಉಪಕಾರವೇ ಆಯಿತು.
ನಿನ್ನೆ ಬಸ್ಸು ದುರಂತಕ್ಕೀಡಾದ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾದೆ. ಅವಘಡದಲ್ಲಿ ನಾನು ಸಿಲುಕಿ ಹಾಕಿಕೊಳ್ಳಲಿಲ್ಲವಲ್ಲಾ ಎಂದು ನನಗೆ ಬಹಳ ಸಂತೋಷವಾಯಿತು ಎನ್ನುತ್ತಾರೆ ಅವರು.