ಡಿ.ಕೆ.ಶಿವಕುಮಾರ್ ಮತ್ತು ಟಿ.ಜೆ ಅಬ್ರಹಾಂ 
ರಾಜ್ಯ

ಬೆನ್ನಿಗಾನಹಳ್ಳಿ ಡಿನೋಟಿಫೈ ಪ್ರಕರಣ: ಡಿಕೆಶಿ ವಿರುದ್ಧ ಸುಪ್ರೀಂನಲ್ಲಿ ವಿಶೇಷ ಮೇಲ್ಮನವಿ

ಚಿವ ಡಿ.ಕೆ ಶಿವಕುಮಾರ್ ವಿರುದ್ಧದ ಬೆನ್ನಿಗಾನಹಳ್ಳಿ ಡಿನೋಟಿಫೈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿದೆ....

ಬೆಂಗಳೂರು : ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧದ ಬೆನ್ನಿಗಾನಹಳ್ಳಿ ಡಿನೋಟಿಫೈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣವನ್ನು ಮರು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಪೀಠವು, ಹೈಕೋರ್ಟ್‌ನಲ್ಲಿಯೇ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿತ್ತು. ನ್ಯಾ. ಆನಂದಬೈರಾರೆಡ್ಡಿ ಅವರಿದ್ದ ನ್ಯಾಯಪೀಠ ಕಳೆದ ಡಿ.18ರಂದು ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಬ್ರಹಾಂ ಮೇಲ್ಮನವಿ ಸಲ್ಲಿಸಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಸಕರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಇಂದಿರಾನಗರ ಸಮೀಪದ ಬೆನ್ನಿಗಾನಹಳ್ಳಿಯ ನಾಲ್ಕೂವರೆ ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡು, ಬೇರೆಯವರಿಗೆ ಮಾರಿದ್ದಾರೆ ಎಂದು ಟಿ.ಜೆ. ಅಬ್ರಹಾಂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪ್ರಕರ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಹಾಕಿದ್ದನ್ನು ಪ್ರಶ್ನಿಸಿ, ಅಬ್ರಹಾಂ ಹೈಕೋರ್ಟ್ ಮೊರೆ ಹೋಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!

ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು: ಯಾರೇ ಒಪ್ಪಿದರೂ-ಒಪ್ಪದಿದ್ದರೂ ನಿಯಮಗಳ ಪ್ರಕಾರವೇ ಲೋಕಸಭೆ ಕಾರ್ಯನಿರ್ವಹಣೆ; ಸ್ಪೀಕರ್ ಓಂ ಬಿರ್ಲಾ

CEC ಜ್ಞಾನೇಶ್ ಕುಮಾರ್ ಪದಚ್ಯುತಿಗೆ ನಿರ್ಣಯ: 200ಕ್ಕೂ ಹೆಚ್ಚು ಸಂಸದರಿಂದ ನೋಟಿಸ್‌ಗೆ ಸಹಿ

ಇರಾನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೊರೆ, ಪ್ರತಿ ತಿಂಗಳು 30,000 ಕೋಟಿ ರೂ. ಹೆಚ್ಚಿನ ವೆಚ್ಚ!

SCROLL FOR NEXT