ರಾಜ್ಯ

ಪರಸ್ತ್ರೀ ಜೊತೆ ಪೇದೆ ಸರಸ: ಬೀಗ ಹಾಕಿ ಕೂಡಿ ಹಾಕಿದ ಪತ್ನಿ

Shilpa D

ಬೆಂಗಳೂರು: ಪರಸ್ತ್ರೀ ಸಂಗ ಮಾಡಿ ಆಕೆಯ ಜೊತೆಗಿದ್ದ ಹೆಡ್ ಕಾನ್ಸ್ ಸ್ಟೇಬಲ್ ನನ್ನು ಪತ್ನಿಯೇ ಬೀಗ ಜಡಿದು ಕೂಡಿ ಹಾಕಿದ ಘಟನೆ ಬೆಂಗಳೂರಿನ ಕುವೆಂಪು ನಗರದಲ್ಲಿ ನಡೆದಿದೆ.

ಕುದೂರು ಪೊಲೀಸ್ ಠಾಣೆ ಹೆಡ್ ಕಾನ್ಸ್ ಸ್ಟೇಬಲ್ ಶಿವಣ್ಣ ಗೌಡ ಪರಸ್ತ್ರೀ ಜೊತೆ ಇದ್ದಾಗ ಸಿಕ್ಕಿ ಬಿದ್ದಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

2000ನೇ ಇಸವಿಯಲ್ಲಿ ಶಿವಣ್ಣಗೌಡ ವಿಶಾಲಾಕ್ಷಿ ಜೊತೆ ವಿವಾಹವಾಗಿತ್ತು. ಆದರೆ ಹಲವು ದಿನಗಳಿಂದ ವಿಶಾಲಾಕ್ಷಿ ಜೊತೆ ಸಂಸಾರ ಮಾಡದೇ ಶಿವಣ್ಣಗೌಡ ಮತ್ತೊಬ್ಬ ಮಹಿಳೆಯ ಜೊತೆ ಸಂಬಂಧ ಇರಿಸಿಕೊಂಡಿದ್ದರು. ಈ ಹಿಂದೆ ತಮಗೆ ವರದಕ್ಷಿಣೆ ಕಿರುಕುಳ ನೀಡಿ ಶಿವಣ್ಣಗೌಡ ಜೈಲಿಗೆ ಕೂಡ ಹೋಗಿ ಬಂದಿದ್ದರು ಎಂದು ನೊಂದ ಪತ್ನಿ ವಿಶಾಲಾಕ್ಷಿ ತಿಳಿಸಿದ್ದಾರೆ.

SCROLL FOR NEXT