ಕುದುರೆಮುಖ ಅರಣ್ಯ ಪ್ರದೇಶದ ಒಂದು ನೋಟ 
ರಾಜ್ಯ

ಕುದುರೆಮುಖ ವನ್ಯಜೀವಿ ಅರಣ್ಯಪ್ರದೇಶದಲ್ಲಿ ಡ್ರೋನ್ ಕಣ್ಗಾವಲು

ಕರ್ನಾಟಕದ ಅತಿ ದೊಡ್ಡ ಸೂಕ್ಷ್ಮ ವನ್ಯಜೀವಿ ವಿಭಾಗವಾದ ಕುದುರೆಮುಖ ವನ್ಯಜೀವಿ ಧಾಮದಲ್ಲಿ ಉಂಟಾಗುವ ಬೆಂಕಿ ಅನಾಹುತಗಳ ಬಗ್ಗೆ ನಿಗಾ ಇಡಲು...

ಬೆಂಗಳೂರು: ಕರ್ನಾಟಕದ ಅತಿ ದೊಡ್ಡ ಸೂಕ್ಷ್ಮ ವನ್ಯಜೀವಿ ವಿಭಾಗವಾದ ಕುದುರೆಮುಖ ವನ್ಯಜೀವಿ ಧಾಮದಲ್ಲಿ ಉಂಟಾಗುವ ಬೆಂಕಿ ಅನಾಹುತಗಳ ಬಗ್ಗೆ ನಿಗಾ ಇಡಲು ಡ್ರೋನ್  ಕಣ್ಗಾವಲು ಹಾಕಲು ಸಿದ್ಧತೆ ನಡೆಸಲಾಗಿದೆ.

ಪಶ್ಚಿಮ ಘಟ್ಟದ ಮೂರು ಅರಣ್ಯ ಪ್ರದೇಶಗಳಲ್ಲಿ ಡ್ರೋನ್ ಕಣ್ಗಾವಲು ಹಾಕಲಾಗುವುದು, ಬೆಂಕಿ ಅನಾಹುತಗಳ ಜೊತೆಗೆ , ಸಂಭವಿಸುವ ಬೇರೆ ಅಪರಾಧಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಿದೆ.

ಶೇ. 40 ರಷ್ಟು  ರಕ್ಷಿತಾರಣ್ಯ ಪ್ರದೇಶವಿದ್ದು, ಇಲ್ಲಿ 1.300 ಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಈ ಪ್ರದೇಶದಲ್ಲಿ ಸಂಭವಿಸುವ ಅತಿ ಹೆಚ್ಚಿನ ಬೆಂಕಿ ಅನಾಹುತಗಳು ಮನುಷ್ಯನಿಂದಲೇ ಆಗುತ್ತಿವೆ.

ಕುದುರೆ ಮುಖ ಅರಣ್ಯಧಾಮದಲ್ಲಿ ಈ ವರ್ಷ ಡ್ರೋನ್ ಕ್ಯಾಮೆರಾ ಅಳವಡಿಸಲಿದ್ದು, ಸದಾ ಯಾವಾಗಲು ಬೆಂಕಿಗೆ ಆಹುತಿಯಾಗುವ ಪ್ರದೇಶಗಳ ಮೇಲೆ ವಿಶೇಷ ನಿಗಾ ಇಡಲಾಗುವುದು. ಇದರಿಂದ ಕಾಡಿನಲ್ಲಿ ಯಾರು ಬೆಂಕಿ ಹಚ್ಚುತ್ತಾರೆ ಎಂಬುದನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ಟು ರಾಜಾ ತಿಳಿಸಿದ್ದಾರೆ.

ಅರಣ್ಯದಲ್ಲಿ ಬೆಂಕಿ ಹತ್ತಿಕೊಂಡಿರುವ ಪ್ರದೇಶವನ್ನು ಆರಂಭದಲ್ಲೇ ಪತ್ತೆಹಚ್ಚಲು ಡ್ರೋನ್  ನೆರವಾಗುತ್ತದೆ. ರಿಮೋಟ್ ಪ್ರದೇಶಗಳಲ್ಲಿ ವಿಚಕ್ಷಣಾ ಗೋಪುರಗಳನ್ನು ನಿರ್ಮಿಸಿ ಹೆಚ್ಚು ಸಾಮರ್ಥ್ಯವುಳ್ಳ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇವುಗಳನ್ನು ನಿಯಂತ್ರಣ ಕೊಠಡಿಯಿಂದಲೇ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುಮಾರು 20ರಿಂದ 30 ಚದರ ಕಿಮೀ ವರೆಗೆ ಪ್ರತಿನಿತ್ಯ ನಿಯಮಿತವಾಗಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗಲಾಗುವುದು. ಇದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ  ನಡೆಯುವ ಅಪರಾಧ ಪತ್ತೆ ಹಚ್ಚಲು ಮತ್ತು ಸಂಭವಿಸಬಹುದಾದ ಅಪರಾಧ ತಡೆಯಲು ಫಾರೆಸ್ಟ್ ಗಾರ್ಡ್ ಗಳಿಗೆ ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.  

ಶೀಘ್ರವೇ ರಕ್ಷಿತ ಅರಣ್ಯ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video