ಹೊಟೆಲ್ ಲಲಿತ್ ಅಶೋಕ್ 
ರಾಜ್ಯ

ಬಾರ್ ಮುಚ್ಚದಿರಲು ಹೊಟೆಲ್ ಲಲಿತ್ ಅಶೋಕ್ "ಅಡ್ಡದಾರಿ"!

ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಗಳನ್ನು ಮುಚ್ಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೆ ಇತ್ತ ಬಾರ್ ಮಾಲೀಕರು ಮಾತ್ರ ಬಾರ್ ಉಳಿಸಿಕೊಳ್ಳಲು ಅಡ್ಡದಾರಿ ತುಳಿಯುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ.

ಬೆಂಗಳೂರು: ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಗಳನ್ನು ಮುಚ್ಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೆ ಇತ್ತ ಬಾರ್ ಮಾಲೀಕರು ಮಾತ್ರ ಬಾರ್ ಉಳಿಸಿಕೊಳ್ಳಲು ಅಡ್ಡದಾರಿ ತುಳಿಯುತ್ತಿರುವ  ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ.

ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಬೆಂಗಳೂರಿನ ಪ್ರತಿಷ್ಠಿತ ಹೊಟೆಲ್ ಲಲಿತ್ ಅಶೋಕ್ ತನ್ನ ಮುಖ್ಯ ಪ್ರವೇಶದ್ವಾರವನ್ನೇ ಮುಚ್ಚಿದ್ದು, ಕಟ್ಟಡದ ಮತ್ತೊಂದು ಬದಿಯಲ್ಲಿ ಪ್ರವೇಶ ದ್ವಾರವನ್ನು ತೆರೆದಿದೆ. 500 ಮೀಟರ್​ ಗಿಂತ ದೂರದಲ್ಲಿದೆ ಎಂದು ತೋರಿಸಿಕೊಳ್ಳುವ ಉದ್ದೇಶದಿಂದ ಲಲಿತ್ ಅಶೋಕ್ ಆಡಳಿತ ಮಂಡಳಿ ಇದುವರೆಗಿದ್ದ ಮುಖ್ಯಪ್ರವೇಶ ದ್ವಾರಕ್ಕೆ ಗೋಡೆ ಕಟ್ಟಿ ಮುಚ್ಚಿದ್ದು, ಪಕ್ಕದಲ್ಲಿ ಮತ್ತೊಂದು ಪ್ರವೇಶ ದ್ವಾರ ನಿರ್ವಿುಸಿ ಓಡಾಟಕ್ಕೆ  ಅವಕಾಶ ಕಲ್ಪಿಸುವ ಮೂಲಕ ಅದೇ ಮುಖ್ಯದ್ವಾರ ಎಂದು ಬಿಂಬಿಸಿದೆ.

ಕುಮಾರಕೃಪಾ ರಸ್ತೆಯಲ್ಲಿರುವ ಹೋಟೆಲ್​ ಗೆ ಈವರೆಗಿದ್ದ ಮುಖ್ಯ ಪ್ರವೇಶ ದ್ವಾರಕ್ಕೆ ದಿಡೀರ್ ಗೋಡೆ ಎದ್ದಿದ್ದು, ಹಳೇ ದ್ವಾರದಿಂದ ನೇರ ಹೋಟೆಲ್ ಒಳಕ್ಕೆ ಹೋಗಬಹುದಾಗಿತ್ತು. ಈಗ ಪಕ್ಕದಲ್ಲಿ ಹೋಟೆಲ್​ಗೆ ಈ ಹಿಂದೆ ಸರ್ವೀಸ್  ರಸ್ತೆಯಾಗಿ ಬಳಕೆಯಾಗುತ್ತಿದ್ದ ರಸ್ತೆ ದ್ವಾರವನ್ನೆ ಅಭಿವೃದ್ಧಿಪಡಿಸಿ ಮುಖ್ಯ ದ್ವಾರವನ್ನಾಗಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹೊಸ ದ್ವಾರದಿಂದ ಪ್ರವೇಶಿಸಿದರೆ, ಹೋಟೆಲ್ ಹಿಂಭಾಗ ತಲುಪಿ ಬಳಿಕ ಮುಂಭಾಗ  ತಲುಪಬೇಕಾಗುತ್ತದೆ. ಆಗ ಹೆದ್ದಾರಿಯಿಂದ ಹೋಟೆಲ್ 500 ಮೀ.ಗಿಂತ ಹೆಚ್ಚು ದೂರದಲ್ಲಿ ಇರುವಂತಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಿಂದ ನುಣುಚಿಕೊಳ್ಳಲು ಈ ತಂತ್ರಗಾರಿಕೆ ಅನುಸರಿಸಲಾಗಿದೆ ಎಂದು  ಆರೋಪಿಸಲಾಗಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೋಟೆಲ್​ನ ಮಾರ್ಕೆಟಿಂಗ್ ಹಾಗೂ ಮಾಹಿತಿ ವಿಭಾಗ ಅಧಿಕಾರಿ ಸಂಧ್ಯಾ ಅವರು, ಹೊಟೆಲ್ ನ ನವೀಕರಣ ಆಡಳಿತ ಮಂಡಳಿಗೆ ಬಿಟ್ಟ  ವಿಚಾರವಾಗಿರುತ್ತದೆ. ಅಂತೆಯೇ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಕೂಡ ಮುಖ್ಯ. ಆದರೆ ಕೋರ್ಟ್ ಆದೇಶಕ್ಕಾಗಿ ಪ್ರವೇಶ ದ್ವಾರದ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ  ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಬಕಾರಿ ಇಲಾಖೆ ಆಯುಕ್ತ ಮಂಜುನಾಥ್ ನಾಯ್ಕ್ ಅವರು, ಲಲಿತ್ ಅಶೋಕ್ ಹೋಟೆಲ್ ಮುಂಭಾಗದಲ್ಲಿ ಪ್ರವೇಶ ದ್ವಾರ ಬದಲಿಸಿರುವ ವಿಚಾರ ಇನ್ನೂ ಗಮನಕ್ಕೆ  ಬಂದಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಕೇರಳ ಮಧ್ಯದಂಗಡಿ ಮಾಲೀಕನೋರ್ವ ಹೆದ್ದಾರಿ ಪಕ್ಕದ ತನ್ನ ಬಾರ್ ಮುಚ್ಚದಿರಲಿ ಎಂದು ತನ್ನ ಬಾರ್ ಸುತ್ತಸುತ್ತುಲೂ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದ. ಇದೀಗ ಪ್ರತಿಷ್ಠಿತ ಲಲಿತ್  ಅಶೋಕ್ ಹೊಟೆಲ್ ಕೂಡ ಅಂತುಹುದೇ ಅಡ್ಡದಾರಿ ತುಳಿದಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್